Job Description: * ಕೇಂದ್ರ ಸರ್ಕಾರವು ಇತ್ತೀಚಿಗೆ ನೀಡಿರುವ ಅಂಕಿಅಂಶಗಳು ಮಾಹಿತಿಗಳ ಪ್ರಕಾರ ಇದೀಗ ಭಾರತದಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(MSME) ಸಂಖ್ಯೆಯು ವಿತ್ತೀಯ ವರ್ಷ 2022 ರಲ್ಲಿ ಶೇ. 75 ಕ್ಕಿಂತಲೂ ಅಧಿಕವಾಗಿ ಏರಿಕೆಯಾಗಿವೆ, ಸರಿ ಸುಮಾರು 8.59 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ ಎಂದಿದ್ದಾರೆ. * ಈ ಹಿಂದೆ 2020-21ರ ಅವಧಿಯಲ್ಲಿ ಸುಮಾರು 4.9 ಲಕ್ಷ ಮಹಿಳಾ ನೇತೃತ್ವದ MSME'ಗಳು ಪೋರ್ಟಲ್‌ನಲ್ಲಿ ನೋಂದಾಯಿಸಿದ್ದವು, ಆದರೆ 2021-22ರಲ್ಲಿ ಸರಿ ಸುಮಾರು 8.59 ಲಕ್ಷ ಮಹಿಳಾ ನೇತೃತ್ವದ MSMEಗಳು (2022 ರ ಮಾರ್ಚ್'ವರೆಗೆ) ನೋಂದಾಯಿಸಿಕೊಂಡಿವೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರು ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. * ಸರ್ಕಾರವು ಜುಲೈ 2020 ರಲ್ಲಿ ಉದ್ಯಮ ನೋಂದಣಿಯೊಂದಿಗೆ MSME ನೋಂದಣಿಗಾಗಿ ಉದ್ಯೋಗ್ ಆಧಾರ್ ಮೆಮೊರಾಂಡಮ್'ನ್ನು ಸಲ್ಲಿಸುವ ಹಿಂದಿನ ಪ್ರಕ್ರಿಯೆಯನ್ನು ಬದಲಾವಣೆಯನ್ನು ಮಾಡಲಾಗಿತ್ತು. ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ ನೀಡಿರುವ ಮಾಹಿತಿಯ ಪ್ರಕಾರ 2021 ರ ಮಾರ್ಚ್. 31 ರಂತೆ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿರುವ ಎಲ್ಲ 211.65 ಕೋಟಿ ಖಾತೆಗಳಲ್ಲಿ 70.64 ಕೋಟಿ ಖಾತೆಗಳು ಮಹಿಳಾ ಖಾತೆದಾರರಿಗೆ ಸೇರಿವೆ ಎನ್ನಲಾಗಿದೆ. * ಪ್ರಮುಖವಾಗಿರುವ '08' ಕೈಗಾರಿಕೆಗಳ ಬೆಳವಣಿಗೆಯು 2022ರ ಫೆಬ್ರುವರಿಯಲ್ಲಿ ಶೇ. 5.8ಕ್ಕೆ ಏರಿಕೆ ಕಂಡಿದೆ. ಹಾಗೆಯೇ ಈ ವರ್ಷದ ಜನವರಿ ತಿಂಗಳಿನಲ್ಲಿ ಶೇ. 4ರಷ್ಟು ಬೆಳವಣಿಗೆ ಕಂಡಿವೆ. ಆದರೆ ಫೆಬ್ರುವರಿ ತಿಂಗಳಿನಲ್ಲಿ ಕಚ್ಚಾತೈಲ ಹಾಗೂ ರಸಗೊಬ್ಬರ ಉತ್ಪಾದನೆಯಲ್ಲಿ ಇಳಿಕೆ ಕಂಡಿದೆ. * 2021ರ ಏಪ್ರಿಲ್‌ನಿಂದ ಈ ವರ್ಷದ ಫೆಬ್ರುವರಿವರೆಗಿನ ಅವಧಿಯಲ್ಲಿ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಹಾಗೂ ವಿದ್ಯುತ್‌ ವಲಯಗಳು ಶೇ. 11ರಷ್ಟು ಬೆಳವಣಿಗೆ ಕಂಡಿವೆ.