Job Description: * ಇತ್ತೀಚಿಗೆ ನಡೆದಿರುವ ಏಕದಿನ ಕ್ರಿಕೆಟ್ ವಿಶ್ವಕಪ್'ನಲ್ಲಿ ಆಸ್ಟ್ರೇಲಿಯಾ ಮಹಿಳೆಯರ ಕ್ರಿಕೆಟ್ ತಂಡವು ಜಯಗಳಿಸಿದೆ. ಇದೀಗ ಆಸ್ಟ್ರೇಲಿಯಾ ಮಹಿಳಾ ಒಟ್ಟಾರೆಯಾಗಿ 7ನೇ ಬಾರಿ ಈ ವಿಶ್ವಕಪ್ ಕಿರೀಟವನ್ನು ಪಡೆದುಕೊಂಡಿದೆ. * ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಮಹಿಳಾತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಿದ್ದವು, ಆಗ ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಅಲೀಸಾ ಹೀಲಿ ಅವರು ಅಮೋಘ ಶತಕವನ್ನು ಬಾರಿಸಿದ್ದಾರೆ. ಹಾಗೆಯೇ ಹೀಲಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಫೈನಲ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮಾಡಿದ್ದಾರೆ. * ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳ'ನಷ್ಟಕ್ಕೆ 356 ರನ್'ಗಳನ್ನೂ ಕಲೆಹಾಕಿದೆ. ಆದರೆ ಇಂಗ್ಲೆಂಡ್‌ ತಂಡವು 43.4 ಓವರ್‌ಗಳಲ್ಲಿ 285 ರನ್'ಗಳನ್ನೂ ಕಲೆಹಾಕಿ ಆಲೌಟ್ ಆಗಿದೆ. * ಆಸ್ಟ್ರೇಲಿಯಾ ತಂಡವು ಕಲೆಹಾಕಿರುವ 356 ರನ್‌ಗಳು 2ನೇ ಅತಿ ಹೆಚ್ಚು ಸ್ಕೋರ್'ಆಗಿದೆ. ಈ ಹಿಂದೆ 2003ರಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಪುರುಷರ ತಂಡವು 2 ವಿಕೆಟ್‌ಗಳ ನಷ್ಟಕ್ಕೆ 359 ರನ್‌'ಗಳನ್ನೂ ಕಲೆಹಾಕಿರುವ ಗರಿಷ್ಠ ಸ್ಕೋರ್ ಆಗಿದೆ. * ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್'ನ್ನು ಜಯಿಸಿಕೊಂಡಿತ್ತು. ಆ ಸಂಧರ್ಭದಲ್ಲಿ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರಕ್ಕೆ ಸ್ಟಾರ್ಕ್ ಹಾಗೂ ಹೀಲಿ ಅವರು ಭಾಗಿಯಾಗಿದ್ದರು. * ಆಸ್ಟ್ರೇಲಿಯನ್ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಮಹಿಳಾ ಆಟಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಯೋಜಿಸಿದ ಎಲ್ಲಾ ವಿಶ್ವ ಶ್ರೇಯಾಂಕಗಳಲ್ಲಿ ಅಗ್ರ ತಂಡವಾಗಿದೆ. * ಆಸ್ಟ್ರೇಲಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಈ ಹಿಂದೆ 1934-35 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದೆ. ಆಟದ 50-ಓವರ್‌ಗಳ ಸ್ವರೂಪದಲ್ಲಿ ಆಸ್ಟ್ರೇಲಿಯಾ ತಂಡವು ಎಲ್ಲಾ ಇನ್ನಿತರ ತಂಡಗಳಿಗಿಂತ ಅಧಿಕವಾಗಿ ವಿಶ್ವಕಪ್‌ಗಳನ್ನು ಜಯಿಸಿಕೊಂಡಿದೆ. 1978, 1982, 1988, 1997, 2005, 2013 ಹಾಗೂ 2022 ರಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಹಾಗೆಯೇ ಈ ಆಸ್ಟ್ರೇಲಿಯಾ ಮಹಿಳಾ ತಂಡವು 2010, 2012, 2014, 2018 ಹಾಗೂ 2020 ರಲ್ಲಿ ICC ಮಹಿಳಾ T20 ವಿಶ್ವಕಪ್'ನ್ನು ಗೆದ್ದಿದ್ದೆ. * 2020 ರ ಏಪ್ರಿಲ್'ನಲ್ಲಿ TrueNorth ರಿಸರ್ಚ್ ನಡೆಸಿರುವ ಸಮೀಕ್ಷೆಯು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದ ಕ್ರೀಡಾ ಅಭಿಮಾನಿಗಳ ಜೊತೆಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ ಎನ್ನಲಾಗಿದೆ.