Job Description: * ಪ್ರಸ್ತುತ ಶ್ರೀಲಂಕಾ ದೇಶದಲ್ಲಿನ ಆರ್ಥಿಕ ಸಂಕಷ್ಟ ಹಾಗೂ ಡೀಸೆಲ್ ಕೊರತೆಯಿಂದ ಬಹಳಷ್ಟು ಕಷ್ಟವನ್ನು ಅನುಭವಿಸುತ್ತದೆ, ಇದೀಗ ಭಾರತವು ದೇಶವು ನೆರೆಯ ಶ್ರೀಲಂಕಾಗೆ ನೆರವಿನ ಹಸ್ತವನ್ನು ಚಾಚಿದೆ. ಇದೀಗ ಭಾರತವು ಶ್ರೀಲಂಕಾಗೆ 40,000 ಮೆಟ್ರಿಕ್ ಟನ್'ನಷ್ಟು ಪ್ರಮಾಣದ ಡೀಸೆಲ್ ರವಾನಿಸಿದೆ. * ಇದೀಗ ಶ್ರೀಲಂಕಾದಲ್ಲಿ 13 ಗಂಟೆಗಳ ಪವರ್ ಕಟ್ ಘೋಷಿಸಲಾಗಿದ್ದು ಈ ಪ್ರಮಾಣದ ವಿದ್ಯುತ್ ಅಭಾವವನ್ನು ಶ್ರೀಲಂಕಾ ದೇಶವು ಈ ಹಿಂದೆ 1996ರಿಂದಲೂ ಅನುಭವಿಸಿಸಿರಲಿಲ್ಲ. ಇದೀಗ ಭಾರತ ರವಾನಿಸಿರುವ ಡೀಸೆಲ್'ನಿಂದಾಗಿ ಪವರ್ ಕಟ್ ಅವಧಿ ಕಡಿಮೆಯಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. * ಕೆಲದಿನಗಳ ಹಿಂದೆ ಭಾರತವು 100 ಕೋಟಿ ಡಾಲರ್ ಹಣದ ನೆರವನ್ನು ಶ್ರೀಲಂಕಾ ದೇಶಕ್ಕೆ ನೀಡಿತ್ತು. ಆದರೂ ಶ್ರೀಲಂಕಾ ದೇಶವು ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸುತ್ತಿದೆ, ಇದೀಗ ಅಲ್ಲಿನ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.