Job Description: * ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ಪೂರೈಸುವುದನ್ನು ಸ್ಥಗಿತಗೊಳಿಸಿದೆ. ಹಾಗೆಯೇ ಇನ್ನಿತರ ಲಸಿಕಾ ಸೌಲಭ್ಯಗಳನ್ನು ನವೀಕರಿಸಲು ಹಾಗೂ ತಪಾಸಣೆಯಲ್ಲಿ ಕಾಣಿಸುವ ನ್ಯೂನತೆಗಳನ್ನು ಪರಿಹರಿಸಲು ತಯಾರಕರಿಗೆ ಸಹಾಯ ಮಾಡಿಕೊಡಲು ಭಾರತದ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್ -19 ಲಸಿಕೆ ವಿಶ್ವಸಂಸ್ಥೆಯ ಏಜೆನ್ಸಿಗಳ ಮೂಲಕ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. * WHO ಹೇಳಿಕೆ ನೀಡಿರುವ ಪ್ರಕಾರ ಲಸಿಕೆ ಪರಿಣಾಮಕಾರಿಯಾಗಿದೆ ಹಾಗೂ ಯಾವುದೇ ಸುರಕ್ಷತಾ ಕಾಳಜಿಗಳಿಲ್ಲ, ಆದರೆ ರಫ್ತಿಗಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರಿಂದ ಕೋವಾಕ್ಸಿನ್ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ. * ಇದೀಗ ರಫ್ತಿಗಾಗಿ ಕೋವಾಕ್ಸಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತನ್ನ ಬದ್ಧತೆಯನ್ನು ಲಸಿಕೆ ತಯಾರಕರು ಸೂಚಿಸಿದ್ದಾರೆ, ಇದೀಗ ದೇಶದಲ್ಲಿ ಸೋಂಕು ವ್ಯಾಪಕವಾಗಿ ಕುಸಿತ ಕಾಣುತ್ತಿದೆ ಈ ಹಿನ್ನಲೆಯಿಂದಾಗಿ ಕೋವಾಕ್ಸಿನ್ ಉತ್ಪಾದನೆಯನ್ನು ನಿಧಾನಗೊಳಿಸುತ್ತಿದ್ದಾರೆ. ಇದೀಗ ಕಂಪನಿಯು 'GMP ಕೊರತೆಗಳನ್ನು ಬಗೆಹರಿಸುವ ಮೂಲಕ ಬದ್ಧತೆಗಳನ್ನು ಅನುಸರಿಸಲು ಬದ್ಧವಾಗಿದೆ ಹಾಗೂ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಹಾಗೂ WHO ಗೆ ಸಲ್ಲಿಸಲು ಸರಿಪಡಿಸುವ ಹಾಗೂ ತಡೆಗಟ್ಟುವ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು WHO ಹೇಳಿಕೆ ನೀಡಿದೆ. * ಕೊವಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. * ವಿಶ್ವ ಆರೋಗ್ಯ ಸಂಸ್ಥೆ (WHO)ಯು ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯಕ್ಕೆ ಜವಾಬ್ದಾರರಾಗಿರುವ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಈ ಸಂಸ್ಥೆಯು 'ಎಲ್ಲ ಜನರಿಂದ ಅತ್ಯುನ್ನತ ಮಟ್ಟದ ಆರೋಗ್ಯವನ್ನು ಸಾಧಿಸುವುದು' ಎಂದು ಹೇಳಿಕೆಯನ್ನು ನೀಡುತ್ತದೆ. ಇದೀಗ ಈ ಸಂಸ್ಥೆಯು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ, ಹಾಗೆಯೇ ಇದು '06' ಪ್ರಾದೇಶಿಕ ಕಚೇರಿಗಳನ್ನು ಜೊತೆಗೆ ಪ್ರಪಂಚದಾದ್ಯಂತ 150 ಕ್ಷೇತ್ರಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. * WHO'ನ್ನು ಈ ಹಿಂದೆ 1948 ರ ಏಪ್ರಿಲ್. 07 ರಂದು ಸ್ಥಾಪಿಸಲಾಯಿತು. ವಿಶ್ವ ಆರೋಗ್ಯ ಅಸೆಂಬ್ಲಿಯ (WHA) ಮೊದಲ ಸಭೆಯು 1948 ರ ಜುಲೈ. 24 ರಂದು ನಡೆದಿದೆ.