Job Description: * ಇದೀಗ ಮಿಜೋರಾಂ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನಲೆಯಿಂದ ಮಿಜೋರಾಂ ಸರ್ಕಾರ ಹಂದಿಗಳು ಹಾಗೂ ಹಂದಿ ಉತ್ಪನ್ನಗಳ ಆಮದಕ್ಕೆ ನಿಷೇಧವನ್ನು ಹೇರಿದೆ. * ಮಿಜೋರಾಂ ರಾಜ್ಯ ಸರ್ಕಾರದ ಅಧಿಕೃತ ಮುಂದಿನ ಆದೇಶದವರೆಗೆ ಬೇರೆ ಬೇರೆ ರಾಜ್ಯಗಳು ಹಾಗೂ ಇತರ ದೇಶಗಳಿಂದ ಜೀವಂತ ಹಂದಿಗಳು, ತಾಜಾ ಹಂದಿಗಳು ಹಾಗೂ ಹೆಪ್ಪುಗಟ್ಟಿದ ಹಂದಿಮಾಂಸ ಹಾಗೆಯೇ ಇನ್ನಿತರ ಹಂದಿಮಾಂಸ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಿಳಿಸಿದೆ. * ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಇಲಾಖೆಯು ಹಂದಿ ಸಾಕಣೆ ಆವರಣದಲ್ಲಿ ಕಡ್ಡಾಯವಾಗಿ ಸೋಂಕು ತಡೆ ಕ್ರಮವನ್ನು ಕೈಗೊಳ್ಳಬೇಕು, ಅದರಂತೆಯೇ ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳಬೇಕು ಜೊತೆಗೆ ಶಂಕಿತ ಹಂದಿಗಳ ಪ್ರತ್ಯೇಕತೆವಾಗಿ ಇಡಬೇಕು ಎಂದು ಸರ್ಕಾರವು ತಿಳಿಸಿದೆ. * ಆಫ್ರಿಕನ್ ಹಂದಿ ಜ್ವರದ ನಿಯಂತ್ರಣ ಹಾಗೂ ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕ್ರಿಯಾ ಯೋಜನೆಯ ಅಡಿಯಲ್ಲಿ ಮೃತ ಹಂದಿ ದೇಹವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು, ಹಾಗೂ ಹಂದಿಗಳ ಅಸಹಜವಾಗಿ ಮರಣ ಹೊಂದಿದರೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಬೇಕು ಎಂದು ತಿಳಿಸಿದೆ. * ಆಫ್ರಿಕನ್ ಹಂದಿ ಜ್ವರವು ಕಳೆದ ವರ್ಷ ಮಾರ್ಚ್‌ನಿಂದ ನವೆಂಬರ್‌ವರೆಗೆ 33,417 ಹಂದಿಗಳನ್ನು ಬಲಿ ತೆಗೆದುಕೊಂಡಿದ್ದು, ಇದರಿಂದಾಗಿ 60.82 ಕೋಟಿ ರೂಪಾಯಿ ನಷ್ಟವಾಗಿದೆ. ಈ ರೋಗ ಹರಡುವುದನ್ನು ತಡೆಯವ ನಿಟ್ಟಿನಲ್ಲಿ ಕಳೆದ ವರ್ಷ 10,910 ಹಂದಿಗಳನ್ನು ಕೊಲ್ಲಲಾಗಿದೆ. ಇದೀಗ ಮಿಜೋರಾಂ ರಾಜ್ಯ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಮಧ್ಯೆ ಹಂದಿಗಳು, ಹಂದಿಮಾಂಸ ಉತ್ಪನ್ನಗಳ ಆಮದಕ್ಕೆ ನಿಷೇಧ ಹೇರಿದೆ.