Job Description: * ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಜೊತೆಯಾಗಿ ಭಾರತ -ನೇಪಾಳ ನಡುವಿನ ರೈಲು ಸಂಚಾರ ಮಾರ್ಗ ಹಾಗೂ ಇನ್ನು ಅನೇಕ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. * ಇತ್ತೀಚಿಗೆ ನೇಪಾಳ ಪ್ರಧಾನಿ ದೇವುಬಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮೂರು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದರು. * ಪ್ರಸ್ತುತ ಭಾರತದ ಗಡಿಯಲ್ಲಿರುವ ಜಯನಗರ ಹಾಗೂ ನೇಪಾಳದ ಬಿಜಾಲ್'ಪುರ್ ನಡುವೆ 1937ರಲ್ಲೇ ರೈಲು ಸಂಚಾರವು ಆರಂಭವಾಗಿದೆ. ಆದರೆ ಈ ಹಿಂದೆ 2001ರಲ್ಲಿನ ಭಾರೀ ಭೂ ಕುಸಿತ ಉಂಟಾಗಿರುವ ಹಿನ್ನಲೆಯಿಂದಾಗಿ ರೈಲು ಸಂಚಾರವು ಸ್ಥಗಿತಗೊಂಡಿತ್ತು. ಇದೀಗ ಈ ರೈಲು ಯೋಜನೆಯು 21 ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ರೈಲು ಸಂಚಾರವು ಪ್ರಾರಂಭಗೊಂಡಿದೆ. * ನೇಪಾಳ ಪ್ರಧಾನಿ ದೇವುಬಾ ಅವರು ಪ್ರಧಾನಿಯಾಗಿ ಭಾರತಕ್ಕೆ 5ನೇ ಬಾರಿ ಭೇಟಿ ನೀಡಿದ್ದಾರೆ. ಇವರು ಭಾರತ-ನೇಪಾಳ ನಡುವಿನ ಸಂಬಂಧದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಪ್ರಸ್ತುತ ಉಭಯ ದೇಶಗಳ ನಾಗರಿಕತೆ, ಸಂಸ್ಕೃತಿ ಪುರಾತನ ಕಾಲದ ಜೊತೆಗೆ ಉತ್ತಮವಾದ ಸಂಬಂಧವನ್ನು ಹೊಂದಿದೆ. * ನೇಪಾಳ ಪ್ರಧಾನಿ ದೇವುಬಾ ಅವರು ಭಾರತಕ್ಕೆ ಭೇಟಿ ನೀಡಿರುವ ಹಿನ್ನಲೆಯಿಂದ ಪ್ರಧಾನಿ ಮೋದಿ ಅವರ ಜೊತೆಯಾಗಿ ಬಿಹಾರ ಸಮೀಪದ ಜಯನಗರ ಮತ್ತು ನೇಪಾಳ ಗಡಿ ಸಮೀಪದ ಕುರ್ತಾ ನಡುವಿನ 35 ಕಿಲೋ ಮೀಟರ್ ರೈಲು ಸಂಚಾರ ಮಾರ್ಗವನ್ನು ಉದ್ಘಾಟಣೆಯನ್ನು ನೆರವೇರಿಸಿದ್ದಾರೆ. * ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ದೇವುಬಾ ಅವರು ನೇಪಾಳದಲ್ಲಿನ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಇದರ ಜೊತೆಗೆ ರುಪೇ ಪೇಮೆಂಟ್ ವ್ಯವಸ್ಥೆಗೆ ಚಾಲನೆಯನ್ನು ನೀಡಿದ್ದಾರೆ. * ಭಾರತ ಮತ್ತು ನೇಪಾಳ ಪ್ರಧಾನಿಗಳು ಜೊತೆಯಾಗಿ ರೈಲ್ವೆ, ಇಂಧನ ಸೇರಿ ಇನ್ನು ಪ್ರಮುಖ '04' ಕ್ಷೇತ್ರಗಳಲ್ಲಿನ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ.