Job Description: * ಇತ್ತೀಚಿಗಿನ ಆರ್ಥಿಕ ಸಹಕಾರ ಹಾಗೂ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ಸಹಿ ಹಾಕಿವೆ. ಈ ಹಿನ್ನಲೆಯಿಂದಾಗಿ ಜವಳಿ, ಚರ್ಮ, ಆಭರಣ ಮತ್ತು ಕ್ರೀಡೆಗೆ ಸಂಬಂಧಪಟ್ಟಿರುವ ಪರಿಕರಗಳು ಸೇರಿ ಭಾರತದ ಶೇ.95 ರಷ್ಟು ವಸ್ತುಗಳಿಗೆ ಆಸ್ಟ್ರೇಲಿಯಾ ದೇಶದಲ್ಲಿ ತೆರಿಗೆ ಮುಕ್ತ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಈ ಒಪ್ಪಂದದ ಮೂಲಕ ತಿಳಿಸಿದ್ದಾರೆ. * ಭಾರತ - ಆಸ್ಟ್ರೇಲಿಯಾ ಒಪ್ಪಂದವು ವರ್ಚುವಲ್ ಸಭೆಯ ಮೂಲಕ ಜರುಗಿದೆ. ಈ ಸಮಾರಂಭದಲ್ಲಿ ವಾಣಿಜ್ಯ, ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹಾಗೂ ಆಸ್ಟ್ರೇಲಿಯಾದ ವ್ಯಾಪಾರ, ಪ್ರವಾಸೋದ್ಯಮ ಸಚಿವ ಡ್ಯಾನ್ ಟೆಹನ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಹಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸಾಕ್ಷಿಯಾಗಿದ್ದಾರೆ. * ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳ ನಡುವೆ ಇರುವ ಬಾಂಧವ್ಯದ ದೃಷ್ಟಿಯು ಬಹಳ ಉತ್ತಮವಾಗಿದೆ. * ಈ ಒಪ್ಪಂದದಿಂದ ದ್ವಿಪಕ್ಷೀಯ ವಹಿವಾಟು ಮುಂಬರುವ '05' ವರ್ಷಗಳಲ್ಲಿ ಸುಮಾರು 2700 ಕೋಟಿ ರೂ. ಗಳಿಂದ 4500 - 5,000 ಕೋಟಿ ರೂ. ಗಳವರೆಗೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.