Job Description: * ಶಕ್ತಿ-ಸಮೃದ್ಧಿಯ ಸಂಕೇತವಾದ ಆನೆ ಹಾಗೂ ನವದ್ರಾವಿಡ ವಾಸ್ತುಶಿಲ್ಪ ಶೈಲಿ ಎಂದು ತಿಳಿಸಲಾಗಿರುವ ವಿಧಾನಸೌಧದ ಚೆಲುವು ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಲಾಂಛನಕ್ಕೆ ಒಂದು ರೀತಿಯಲ್ಲಿ ಮೆರುಗು ಬಂದಿದೆ. * ಜೈನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯುವ ಸಬಲೀಕರಣ-ಕ್ರೀಡಾ ಇಲಾಖೆಗಳು ಆಯೋಜಿಸಿರುವ ಕ್ರೀಡಾಕೂಟವು ಇದೇ 24 ರಿಂದ ಮೇ 3 ರ ವರೆಗೆ ಉದ್ಯಾನ ನಗರಿಯಲ್ಲಿ ಜರುಗಿದೆ ಎಂದಿದ್ದಾರೆ. * ಆನೆ ಹಾಗೂ ವಿಧಾನಸೌಧ ಕಂಗೊಳಿಸುವ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. 'ವೀರ' ಆನೆ, 'ಜಯ' ಹುಲಿ, 'ವಿಜಯ' ಜಿಂಕೆಯನ್ನು ಹೋಲುವ ಮೆಸ್ಕಾಟ್‌ ಹಾಗೂ ಖೇಲೊ ಇಂಡಿಯಾ ಯೋಜನೆಯ ಲಾಂಛನವನ್ನು ಒಳಗೊಂಡಿರುವ ಜೆರ್ಸಿಗಳನ್ನು ಬಿಡುಗಡೆ ಮಾಡಲಾಗಿದೆ. * ಎರಡು ವರ್ಷಗಳ ಹಿಂದೆ ಭುವನೇಶ್ವರದಲ್ಲಿ ಕೆಇಯುಜಿಯ ಮೊದಲ ಆವೃತ್ತಿಯು ಜರುಗಿತ್ತು. ಆಗ 17 ಸ್ಪರ್ಧೆಗಳು ನಡೆದಿದ್ದವು. ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ 2 ನೇ ಆವೃತ್ತಿಯ ಕೂಟದಲ್ಲಿ 20 ಸ್ಪರ್ಧೆಗಳು ಇರಲಿವೆ ಎಂದಿದ್ದಾರೆ. * ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಬಾರಿ ಕ್ರೀಡಾಕೂಟದಲ್ಲಿ 4500 ಕ್ಕೂ ಅಧಿಕ ಕ್ರೀಡಾ ಪಟುಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಲು ವಿಶ್ವವಿದ್ಯಾಲಯಗಳು ಪ್ರೇರಣೆಯಾಗಬೇಕು ಎಂದಿದ್ದಾರೆ. * ರಾಜ್ಯದ ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಅವರು ಈ ಖೇಲೊ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ 50 ಕೋಟಿ ರೂ. ನೀಡುವಂತೆ ಕೇಂದ್ರದ ಮುಂದೆ ಕೋರಿಕೆಯನ್ನು ಇಡಲಾಗಿತ್ತು ಆದರೆ 17 ಕೋಟಿ ರೂ. ಬಿಡುಗಡೆಯಾಗಿದೆ ಎಂದಿದ್ದಾರೆ. * ಇದೇ ಸಂದರ್ಭದಲ್ಲಿ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ನ್ನು ಉದ್ಘಾಟನೆ ಮಾಡಲಾಯಿತು.