Job Description: ➤ ಭಾರತೀಯ ಸಾಂಪ್ರದಾಯಿಕ ಕಲೆ ಮತ್ತು ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD - ನಬಾರ್ಡ್) ನೇತೃತ್ವದಲ್ಲಿ ದೇಶದ 28 ಹೊಸ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರತಿಷ್ಠಿತ ಭೌಗೋಳಿಕ ಗುರುತಿನ (Geographical Indication - GI Tag) ನೋಂದಣಿ ದೊರೆತಿದೆ. ➤ ಈ ಹೊಸ ಸೇರ್ಪಡೆಯೊಂದಿಗೆ, ನಬಾರ್ಡ್ ಬೆಂಬಲದೊಂದಿಗೆ ಜಿಐ ಮಾನ್ಯತೆ ಪಡೆದ ಭಾರತೀಯ ಉತ್ಪನ್ನಗಳ ಒಟ್ಟು ಸಂಖ್ಯೆ 176 ಕ್ಕೆ ಏರಿಕೆಯಾಗಿದೆ.➤ ಪ್ರಮುಖ ಜಿಐ ಮಾನ್ಯತೆ ಪಡೆದ ಉತ್ಪನ್ನಗಳು (ರಾಜ್ಯವಾರು): ನಬಾರ್ಡ್ ಅಧ್ಯಕ್ಷರಾದ ಶಾಜಿ ಕೃಷ್ಣನ್ ವಿ. ಅವರ ಮಾರ್ಗದರ್ಶನದಲ್ಲಿ ಈ ಬಾರಿ ಹಲವು ಅಪರೂಪದ ಕರಕುಶಲ ಮತ್ತು ಕೃಷಿ ಉತ್ಪನ್ನಗಳಿಗೆ ಈ ವಿಶಿಷ್ಟ ಮನ್ನಣೆ ಲಭಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ: ಬಿಹಾರ: ನಳಂದಾ ಬವನ್‌ಬುಟಿ ಸೀರೆ ಮತ್ತು ಬಟ್ಟೆಗಳು (Nalanda Bawanbuti Saree), ಗಯಾ ಪತ್ಥರಕಟ್ಟಿ ಕಲ್ಲಿನ ಕಲೆ (Gaya Pattharkatti Stone Craft). ಜಾರ್ಖಂಡ್: ಕುಚೈ ಸಿಲ್ಕ್ (Kuchai Silk) ಮತ್ತು ಭಗೈಯಾ ಸಿಲ್ಕ್ ಸೀರೆಗಳು. ಅಸ್ಸಾಂ: ಬಿಹೂ ಪೆಪಾ (Bihu Pepa - ಸಾಂಪ್ರದಾಯಿಕ ಸಂಗೀತ ಉಪಕರಣ) ಮತ್ತು ಬಾ ಶಿಲ್ಪ್ (ಬಿದಿರಿನ ಕರಕುಶಲ ಕಲೆ). ಹಿಮಾಚಲ ಪ್ರದೇಶ: ಸಾಂಪ್ರದಾಯಿಕ ಮರದ ಕೆತ್ತನೆಗಳು (Wood Carving Craft). ಮಧ್ಯಪ್ರದೇಶ: ಖಜುರಾಹೊ ಲೋಹದ ಕಲೆ (Khajuraho Metal Craft). ➤ ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಬೂಸ್ಟರ್! 13,000ಕ್ಕೂ ಹೆಚ್ಚು ಕುಶಲಕರ್ಮಿಗಳು: ನಬಾರ್ಡ್ ತನ್ನ 'ಜಿಐ ಫೆಸಿಲಿಟೇಶನ್ ಕೇಂದ್ರಗಳ' ಮೂಲಕ 13 ಸಾವಿರಕ್ಕೂ ಹೆಚ್ಚು ಸ್ಥಳೀಯ ಕುಶಲಕರ್ಮಿಗಳನ್ನು ನೇರವಾಗಿ ದೊಡ್ಡ ಮಾರುಕಟ್ಟೆಯೊಂದಿಗೆ ಸಂಪರ್ಕಿಸಿದೆ. 50,000+ ಉದ್ಯೋಗಾವಕಾಶ: ಈ ಯೋಜನೆಯ ಮೂಲಕ ದೇಶಾದ್ಯಂತ ಸುಮಾರು 50 ಸಾವಿರಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ನಕಲು ತಡೆಗೆ ಕಾನೂನು ರಕ್ಷಣೆ: ಜಿಐ ಟ್ಯಾಗ್ ಸಿಗುವುದರಿಂದ ಈ ಉತ್ಪನ್ನಗಳ ನಕಲಿ ಮಾರಾಟಕ್ಕೆ ಬ್ರೇಕ್ ಬೀಳಲಿದ್ದು, ಗ್ರಾಹಕರಿಗೆ ಅಸಲಿ ಉತ್ಪನ್ನಗಳು ಸಿಗಲಿವೆ. KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ