ಗಡಿ ರಸ್ತೆಗಳ ಸಂಸ್ಥೆಯ(BRO) ವಿಭಾಗದಲ್ಲಿ ಖಾಲಿ ಇರುವ 627 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:20 ಮಾರ್ಚ್ 2021

ಭಾರತೀಯ ಸಶಸ್ತ್ರ ಪಡೆಗಳ ಬೆಂಬಲವನ್ನು ನೀಡುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್(BRO) ಭಾರತದ ಗಡಿ ರಸ್ತೆ ನಿರ್ಮಾಣ ಕಾರ್ಯಕಾರಿ ಪಡೆಯಾಗಿದ್ದು, ಪ್ರಸ್ತುತ ಸಂಸ್ಥೆಯ ವಿಭಾಗದಲ್ಲಿ ಖಾಲಿ ಇರುವ 627 ಮಲ್ಟಿ ಸ್ಕಿಲ್ಡ್ ವರ್ಕರ್, ಸ್ಟೋರ್ ಕೀಪರ್, ಡ್ರಾಫ್ಟ್ಸ್‌ಮನ್ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
- ಅರ್ಜಿ ಪ್ರಕ್ರಿಯೆಯು ಏಪ್ರಿಲ್ 05, 2021 ಕ್ಕೆ ಮುಕ್ತಾಯಗೊಳ್ಳುತ್ತದೆ.
* ಖಾಲಿ ಹುದ್ದೆಗಳ ವಿವರ:
- ಡ್ರಾಫ್ಟ್ ಮ್ಯಾನ್ - 43 ಹುದ್ದೆಗಳು
- ಸ್ಟೋರ್ ಮೇಲ್ವಿಚಾರಕ - 11 ಹುದ್ದೆಗಳು
- ರೇಡಿಯೋ ಮೆಕ್ಯಾನಿಕ್- 04 ಹುದ್ದೆಗಳು
- ಲ್ಯಾಬ್ ಸಹಾಯಕ- 01 ಹುದ್ದೆಗಳು
- ಮಲ್ಟಿ ಸ್ಕಿಲ್ಡ್ ವರ್ಕರ್ (ಮೇಸನ್) - 100 ಹುದ್ದೆಗಳು
- ಮಲ್ಟಿ ಸ್ಕಿಲ್ಡ್ ವರ್ಕರ್ (ಡ್ರೈವರ್ ಎಂಜಿನ್ ಸ್ಟ್ಯಾಟಿಕ್) - 150 ಹುದ್ದೆಗಳು
- ಶಾಪ್ ಕೀಪರ್ ತಾಂತ್ರಿಕ- 318 ಹುದ್ದೆಗಳು
No. of posts: 627





Comments