Job Description: * ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರಮಟ್ಟದ 'ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ'ಕ್ಕೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ( ಕೊಡಗು ಜಿಲ್ಲೆ) ಆಯ್ಕೆಯಾಗಿದೆ.* 2021-22 ನೇ ಸಾಲಿನ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ರೂಪಿಸುವ ಮೂಲಕ ಕೊಡಗು ಜಿಲ್ಲೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ 1.5 ಕೋಟಿ ರೂಪಾಯಿ ಪ್ರಥಮ ಬಹುಮಾನದ ಸ್ಥಾನಕ್ಕೆ ಆಯ್ಕೆಯಾಗಿದೆ.* 2023ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಇದಾಗಿದ್ದು, ಕರ್ನಾಟಕ ರಾಜ್ಯದಿಂದ ಏಕೈಕ ಗ್ರಾಮ ಪಂಚಾಯಿತಿ ಈ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ, ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದೆ.* 'ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರ'ವು 1.5 ಕೋಟಿ ರೂಪಾಯಿ ಪ್ರಥಮ ಬಹುಮಾನ ಮತ್ತು 75 ಲಕ್ಷ ದ್ವಿತೀಯ ಬಹುಮಾನ ಹಾಗು ತೃತೀಯ ಬಹುಮಾನ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.