Job Description: ➤ ಭಾರತದ ಐಟಿ ಹಬ್ ಆಗಿರುವ ಕರ್ನಾಟಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.41ರಷ್ಟು ಪಾಲು ಹೊಂದುವ ಮೂಲಕ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ರಾಜ್ಯವು ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಪಾಲಿನೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಮರ್ಚೆಂಡೈಸ್ ರಫ್ತಿನಲ್ಲಿ ಶೇ.7.78ರಷ್ಟು ಪಾಲಿನೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ➤ ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ರಫ್ತು ಉತ್ತೇಜನಾ ಸಮಿತಿ (SLEPC - State Level Export Promotion Committee) ಸಭೆಯಲ್ಲಿ ಈ ಪ್ರಮುಖ ಅಧಿಕೃತ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿದೆ. ➤ ಕೇಂದ್ರದ 'District as Export Hub (DEH)' ಯೋಜನೆಯಡಿ ಕರ್ನಾಟಕದ ಬೆಂಗಳೂರು ನಗರ, ಬೆಳಗಾವಿ, ಹಾಸನ, ಕೋಲಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲ ಹಂತದಲ್ಲಿ ಆಯ್ಕೆಯಾಗಿವೆ. ➤ರಫ್ತಿಗೆ ಉತ್ತೇಜನ ನೀಡಲು ಇ-ಕಾಮರ್ಸ್ ನೆರವು, ಸಾಗಣೆ ವೆಚ್ಚ ಸಬ್ಸಿಡಿ, ಗೋದಾಮು ಸೌಲಭ್ಯ, ಖರೀದಿದಾರರು-ಮಾರಾಟಗಾರರ ಸಮಾವೇಶಗಳು ಸೇರಿದಂತೆ ಹಲವು ಪ್ರೋತ್ಸಾಹಕ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಜೊತೆಗೆ, VTPC ಮೂಲಕ ರಫ್ತು ತರಬೇತಿ (EMTP) ಹಾಗೂ FTA ಕುರಿತು ಕಾರ್ಯಾಗಾರಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ