➤ ಹೂಡಿಕೆ ಸ್ನೇಹಿ ಸೂಚ್ಯಂಕ: ಅಗ್ರಸ್ಥಾನ ಪಡೆದ ರಾಜ್ಯಗಳು: ಈ ಸೂಚ್ಯಂಕದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟು 4 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಭೌಗೋಳಿಕ ಮತ್ತು ಆರ್ಥಿಕ ರಚನೆಗೆ ಅನುಗುಣವಾಗಿ ಪ್ರಮುಖ ಮೂರು ವಿಭಾಗಗಳಲ್ಲಿ ರ‍್ಯಾಂಕಿಂಗ್ ನೀಡಲಾಗಿದೆ.
1. ದೊಡ್ಡ ರಾಜ್ಯಗಳ ವಿಭಾಗ:
ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಭಾರತದ ಕೈಗಾರಿಕಾ ಹಬ್ ಆದ ಗುಜರಾತ್ ಒಟ್ಟು 100 ಕ್ಕೆ 56.6 ಅಂಕಗಳನ್ನು ಪಡೆಯುವ ಮೂಲಕ ದೇಶದಲ್ಲೇ ಅತ್ಯಂತ ಹೂಡಿಕೆ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
01. ಗುಜರಾತ್:56.6
02. ಮಹಾರಾಷ್ಟ್ರ:53.7
03. ತಮಿಳುನಾಡು: 53.3
04. ಗೋವಾ
05. ಒಡಿಶಾ
2. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗ (Hilly & NE States)
- ಪ್ರಥಮ ಸ್ಥಾನ: ಉತ್ತರಾಖಂಡ
- ದ್ವಿತೀಯ ಸ್ಥಾನ: ಅಸ್ಸಾಂ
- ತೃತೀಯ ಸ್ಥಾನ: ಹಿಮಾಚಲ ಪ್ರದೇಶ
- ಈ ವಿಭಾಗದಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಮತ್ತು ಚಂಡೀಗಢ ನಂತರದ ಸ್ಥಾನಗಳಲ್ಲಿವೆ.
➤ ಕರ್ನಾಟಕದ ಸ್ಥಾನ ಮತ್ತು ಪ್ರದರ್ಶನ : ನಿತಿ ಆಯೋಗ್‌ನ ಪ್ರಥಮ ಹೂಡಿಕೆ ಸ್ನೇಹಿ ಸೂಚ್ಯಂಕದಲ್ಲಿ 'ಫ್ರಂಟ್‌ರನ್ನರ್ಸ್' ವಿಭಾಗದಲ್ಲಿ ಸ್ಥಾನ ಪಡೆದಿರುವ ಕರ್ನಾಟಕವು, ದೇಶದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ (FDI) 85% ಪಾಲು ಹೊಂದಿರುವ ಪ್ರಮುಖ 5 ರಾಜ್ಯಗಳಲ್ಲಿ ಒಂದಾಗುವುದರ ಜೊತೆಗೆ ವ್ಯವಹಾರದ ವಾತಾವರಣ (Business Climate) ಸ್ತಂಭದಲ್ಲಿ ದೇಶದಲ್ಲೇ 2ನೇ ಅತ್ಯುತ್ತಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
➤ ಸೂಚ್ಯಂಕದ 8 ಪ್ರಮುಖ ಸ್ತಂಭಗಳು:
- ಮೂಲಸೌಕರ್ಯ
- ವ್ಯವಹಾರದ ವಾತಾವರಣ
- ಸಂಪನ್ಮೂಲಗಳ ಲಭ್ಯತೆ
- ಸರ್ಕಾರದ ನೀತಿಗಳು
- ನಿಯಂತ್ರಕ ಸುಲಭತೆ
- ಸಂಸ್ಥಾಗತ ಪರಿಸರ
- ಹಣಕಾಸಿನ ಆರೋಗ್ಯ
- ಪರಿಸರ ಸ್ಥಿತಿಸ್ಥಾಪಕತ್ವ