Job Description: ➤ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಅನುಮೋದನೆಯೊಂದಿಗೆ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (NSE) ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್ (EGR - Electronic Gold Receipts) ವಹಿವಾಟು ವಿಭಾಗವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಮೂಲಕ ಭಾರತದ ಭೌತಿಕ ಚಿನ್ನದ ಮಾರುಕಟ್ಟೆಯನ್ನು ಔಪಚಾರಿಕ ಹಾಗೂ ಪಾರದರ್ಶಕ ಶೇರು ಮಾರುಕಟ್ಟೆ ಚೌಕಟ್ಟಿಗೆ ತರುವ ಬೃಹತ್ ಹೆಜ್ಜೆಯನ್ನು ಇಡಲಾಗಿದೆ.➤ ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್ (EGR) ಎಂಬುದು ಶೇರು ಮಾರುಕಟ್ಟೆಯಲ್ಲಿ ನೋಂದಾಯಿತವಾಗಿರುವ ಡಿಜಿಟಲ್ ಪ್ರತಿಪತ್ರ (Security) ಆಗಿದೆ. ಪ್ರತಿಯೊಂದು EGR ಸಹ SEBI ಮಾನ್ಯತೆ ಪಡೆದ ವಾಲ್ಟ್‌ಗಳಲ್ಲಿ (Vaults) ಭದ್ರವಾಗಿಟ್ಟಿರುವ ನೈಜ/ಭೌತಿಕ ಚಿನ್ನದ ಹಿನ್ನೆಲೆಯನ್ನು ಹೊಂದಿರುತ್ತದೆ. ಶೇರುಗಳನ್ನು (Shares) ಡಿಮ್ಯಾಟ್ (Demat) ಖಾತೆಯಲ್ಲಿ ಹೊಂದುವಂತೆಯೇ, ಹೂಡಿಕೆದಾರರು ಚಿನ್ನವನ್ನು ಕೂಡ ಡಿಜಿಟಲ್ ರೂಪದಲ್ಲಿ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಇಟ್ಟುಕೊಳ್ಳಬಹುದು ಮತ್ತು ವಹಿವಾಟು ನಡೆಸಬಹುದು. ಹೂಡಿಕೆದಾರರು ಬಯಸಿದಾಗ ತಮ್ಮ EGR ಅನ್ನು ಹಿಂತಿರುಗಿಸಿ ನೇರವಾಗಿ ಭೌತಿಕ ಚಿನ್ನವನ್ನು (Physical Gold) ಪಡೆಯುವ ಅವಕಾಶವೂ ಇರುತ್ತದೆ. ➤ EGR ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್ (EGR) ವ್ಯವಸ್ಥೆಯು ಅನುಮೋದಿತ ವಾಲ್ಟ್‌ಗಳಲ್ಲಿ ಭೌತಿಕ ಚಿನ್ನವನ್ನು ಡೆಪಾಸಿಟ್ ಮಾಡಿ ಡಿಜಿಟಲ್ EGR ಸೃಷ್ಟಿಸುವುದು, ಅದನ್ನು ಶೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವುದು, ಮತ್ತು ಅಗತ್ಯವಿದ್ದಾಗ ಹಿಂತಿರುಗಿಸಿ ನೈಜ ಚಿನ್ನವಾಗಿ ಪಡೆಯುವ ಮೂರು ಹಂತಗಳಲ್ಲಿ ಕೆಲಸ ಮಾಡುತ್ತದೆ.➤ EGR ನ ಪ್ರಮುಖ ಲಕ್ಷಣಗಳು: ಶುದ್ಧತೆಯ ಮಾನದಂಡ: 999 (99.9% ಶುದ್ಧತೆ) ಮತ್ತು 995 (99.5% ಶುದ್ಧತೆ) ಶ್ರೇಣಿಯ ಚಿನ್ನದಲ್ಲಿ ಲಭ್ಯ. ವಿವಿಧ ತೂಕದ ಲಭ್ಯತೆ (Denominations): 100 ಮಿಲಿಗ್ರಾಂ (100 mg), 1 ಗ್ರಾಂ, 10 ಗ್ರಾಂ, 100 ಗ್ರಾಂ ಮತ್ತು 1 ಕೆಜಿ ಪ್ರಮಾಣಗಳಲ್ಲಿ ಚಿನ್ನವನ್ನು ಖರೀದಿಸಬಹುದು. ವಹಿವಾಟು ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:00 ರಿಂದ ರಾತ್ರಿ 11:30 / 11:55 ರವರೆಗೆ ವಹಿವಾಟಿಗೆ ಅವಕಾಶ. ಸೆಟಲ್‌ಮೆಂಟ್ ಚಕ್ರ: T+1 ದಿನಗಳ ಸೆಟಲ್‌ಮೆಂಟ್. GST ನಿಯಮ: ಶೇರು ಮಾರುಕಟ್ಟೆಯಲ್ಲಿ EGR ವಹಿವಾಟು ನಡೆಸುವಾಗ ಯಾವುದೇ GST ಇರುವುದಿಲ್ಲ. ಆದರೆ EGR ಅನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಿ ಹಿಂಪಡೆಯುವಾಗ ಮಾತ್ರ 3% GST ಅನ್ವಯಿಸುತ್ತದೆ. ➤ ಭೌತಿಕ ಚಿನ್ನಕ್ಕೆ ನೈಜ ಭದ್ರತೆಯ ಕೊರತೆ ಮತ್ತು Gold ETF ಗೆ ಭೌತಿಕ ಚಿನ್ನವಾಗಿ ಪಡೆಯುವ ಅವಕಾಶವಿಲ್ಲದಿರುವುದಕ್ಕೆ ಹೋಲಿಸಿದರೆ, EGR ವ್ಯವಸ್ಥೆಯು ಸೆಬಿ (SEBI) ನಿಯಂತ್ರಣದಡಿಯಲ್ಲಿ ಕನಿಷ್ಠ 100 mg ನಿಂದ ಆರಂಭಿಸಿ ಡಿಜಿಟಲ್‌ನಲ್ಲಿ ವಹಿವಾಟು ನಡೆಸುವ ಮತ್ತು ಬೇಕಾದಾಗ ನೈಜ ಚಿನ್ನವಾಗಿ ಹಿಂಪಡೆಯುವ ಪಾರದರ್ಶಕ ಸೌಲಭ್ಯ ನೀಡುತ್ತದೆ. ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ