Job Description: ➤ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬೆಟ್ಟಸಾಲುಗಳ ದೇವದಾರಿ ಗುಹೆಗಳಲ್ಲಿ (Devadari Caves) ಪತ್ತೆಯಾಗಿದ್ದ ಆದಿಮಾನವನ ವಾಸಸ್ಥಳ ಮತ್ತು ಶಿಲಾ ಆಯುಧಗಳು 10,000 ವರ್ಷಗಳಿಗಿಂತಲೂ ಹಳೆಯವು ಎಂದು ಕಾರ್ಬನ್ ಡೇಟಿಂಗ್‌ (Carbon Dating) ಸಂಶೋಧನೆಯಿಂದ ದೃಢಪಟ್ಟಿದೆ. ಸ್ಥಳ: ದೇವದಾರಿ ಗುಹೆ, ನವಲೋಟಿ ಸಮೀಪ, ಸ್ವಾಮಿಮಲೈ ಬೆಟ್ಟಸಾಲು, ಸಂಡೂರು ತಾಲೂಕು (ಬಳ್ಳಾರಿ ಜಿಲ್ಲೆ). ವಿಶೇಷತೆ: ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ (ಸಮುದ್ರ ಮಟ್ಟದಿಂದ 850 ಮೀಟರ್) ಸಿಕ್ಕಿದ ಮೊದಲ ಆದಿಮಾನವನ ಗುಹಾ ವಾಸಸ್ಥಳ. ಕಾಲಘಟ್ಟ: ಮಧ್ಯಶಿಲಾಯುಗ (Mesolithic Age - 10,000+ ವರ್ಷಗಳ ಹಿಂದೆ) ಹಾಗೂ ನವಶಿಲಾಯುಗ (Neolithic Age - 5,000 ವರ್ಷಗಳ ಹಿಂದೆ). ಪ್ರಮುಖ ಸಂಶೋಧಕರು: ಪ್ರಖ್ಯಾತ ಪ್ರಾಗೈತಿಹಾಸ ತಜ್ಞ ಪ್ರೊ. ರವಿ ಕೋರಿಶೆಟ್ಟರ್ ಮತ್ತು ತಂಡ. ದೊರೆತ ಪಳೆಯುಳಿಕೆಗಳು: ಸೂಕ್ಷ್ಮ ಶಿಲಾ ಆಯುಧಗಳು (Microliths), ಚಾಲ್ಸೆಡೋನಿ, ಕ್ವಾರ್ಟ್ಸ್ ಶಿಲೆಗಳು ಹಾಗೂ ಹಸು ಮತ್ತು ಆಡಿನ ಮೂಳೆಗಳು. ➤ ಸಂಡೂರಿನ ದೇವದಾರಿ ಗುಹೆಯೊಳಗೆ ಸ್ಥಳೀಯರು ದೇವಸ್ಥಾನ ನಿರ್ಮಿಸಲು ಕಂದಕ ತೋಡುತ್ತಿದ್ದಾಗ ಕೆಲವು ಪ್ರಾಚೀನ ಕುರುಹುಗಳು ಲಭ್ಯವಾಗಿದ್ದವು. ತದನಂತರ ಪ್ರೊ. ರವಿ ಕೋರಿಶೆಟ್ಟರ್ ಅವರ ನೇತೃತ್ವದ ತಂಡವು ಜಂಟಿ ಕ್ಷೇತ್ರ ಕಾರ್ಯ ನಡೆಸಿ, ದೊರೆತ ಪಳೆಯುಳಿಕೆಗಳನ್ನು ಅಮೆರಿಕದ ಬೀಟಾ ಅನಾಲಿಟಿಕ್ (Beta Analytic) ಪರೀಕ್ಷಾ ಪ್ರಯೋಗಾಲಯಕ್ಕೆ ಕಾರ್ಬನ್ ಡೇಟಿಂಗ್ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿತ್ತು.➤ ಸಿಕ್ಕಿರುವ ಪ್ರಮುಖ ಆಯುಧಗಳು: ಚಾಲ್ಸೆಡೋನಿ (Chalcedony) ಕ್ವಾರ್ಟ್ಸ್ (Quartz) ಫೆರುಜಿನಸ್ ಚರ್ಟ್ (Ferruginous Chert) ➤ ಪ್ರಸ್ತುತ ಈ ಐತಿಹಾಸಿಕ ದೇವದಾರಿ ಗುಹೆಗಳು ಮತ್ತು ಸ್ವಾಮಿಮಲೈ ಬೆಟ್ಟಸಾಲುಗಳ ವ್ಯಾಪ್ತಿಯಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ (KIOCL) ಪ್ರಸ್ತಾವಿತ ಗಣಿಗಾರಿಕೆ ಪ್ರದೇಶ ಬರಲಿದ್ದು, ಗಣಿಗಾರಿಕೆ ಆರಂಭವಾದರೆ ಈ ಪ್ರಾಚೀನ ಶೋಧನಾ ತಾಣ ಹಾಗೂ ಅಮೂಲ್ಯ ಪ್ರಾಗೈತಿಹಾಸಿಕ ಕುರುಹುಗಳಿಗೆ ಸಂಪೂರ್ಣ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ