Job Description: ➤ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಗಡಿ ಭದ್ರತಾ ಪಡೆ (BSF) 18ನೇ ಬೆಟಾಲಿಯನ್ ಹೊರಠಾಣೆಗೆ ಭೇಟಿ ನೀಡಿ, ದೇಶದ ಅತ್ಯಂತ ಆಯಕಟ್ಟಿನ ಪ್ರದೇಶವಾದ ‘ಚಿಕನ್ ನೆಕ್’ (Chicken's Neck / Siliguri Corridor) ಪ್ರದೇಶದ ಭದ್ರತಾ ವ್ಯವಸ್ಥೆಯನ್ನು ಉನ್ನತ ಮಟ್ಟದ ಸಭೆಯಲ್ಲಿ ಪರಾಮರ್ಶಿಸಿದ್ದಾರೆ. ➤ 'ಚಿಕನ್ ನೆಕ್' (ಸಿಲಿಗುರಿ ಕಾರಿಡಾರ್): ಭಾರತದ ಮುಖ್ಯಭೂಮಿಯನ್ನು ಈಶಾನ್ಯ ಭಾರತದ 8 ರಾಜ್ಯಗಳಿಗೆ (Seven Sisters + Sikkim) ಸಂಪರ್ಕಿಸುವ ಏಕೈಕ ಕಿರಿದಾದ ಭೂಭಾಗವನ್ನು ‘ಸಿಲಿಗುರಿ ಕಾರಿಡಾರ್’ ಅಥವಾ ‘ಚಿಕನ್ ನೆಕ್’ ಎಂದು ಕರೆಯಲಾಗುತ್ತದೆ. ಉದ್ದ ಹಾಗೂ ಅಗಲ: ಈ ಕಾರಿಡಾರ್ ಸುಮಾರಾಗಿ 60 ಕಿ.ಮೀ ಉದ್ದವಿದ್ದು, ಸರಾಸರಿ 22 ಕಿ.ಮೀ ಅಗಲವಿದೆ. ಕೆಲವು ಕಡೆಗಳಲ್ಲಿ ಇದರ ಅಗಲ ಕೇವಲ 17 ಕಿ.ಮೀ ಗೆ ಕುಗ್ಗುತ್ತದೆ. ಸ್ಥಳ: ಇದು ಪಶ್ಚಿಮ ಬಂಗಾಳದ ಸಿಲಿಗುರಿ ನಗರದ ವ್ಯಾಪ್ತಿಯಲ್ಲಿದೆ. ಭೌಗೋಳಿಕ ಗಡಿಗಳು: ಉತ್ತರಕ್ಕೆ: ನೇಪಾಳ, ಭೂತಾನ್ ಮತ್ತು ಟಿಬೆಟ್‌ನ ಚಂಬಿ ಕಣಿವೆ (ಚೀನಾ ನಿಯಂತ್ರಣ) ದಕ್ಷಿಣಕ್ಕೆ: ಬಾಂಗ್ಲಾದೇಶ ➤ ಈ ಪ್ರದೇಶದ ಭೂತಂತ್ರಜ್ಞಾನ ಮತ್ತು ಸವಾಲುಗಳು: ಏಕೈಕ ಸಂಪರ್ಕ ಕೊಂಡಿ: ಈ ಕಾರಿಡಾರ್ ಬಂದ್ ಆದರೆ ಈಶಾನ್ಯ ಭಾರತದ ರಾಜ್ಯಗಳೊಂದಿಗೆ ರಸ್ತೆ ಮತ್ತು ರೈಲು ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಚೀನಾ ಬೆದರಿಕೆ (ಚಂಬಿ ಕಣಿವೆ): ಸಿಕ್ಕಿಂ ಮತ್ತು ಭೂತಾನ್ ಮಧ್ಯೆ ಇರುವ ಟಿಬೆಟ್‌ನ ಚಂಬಿ ಕಣಿವೆ (Chumbi Valley) ಚೀನಾದ ಹಿಡಿತದಲ್ಲಿದೆ. ಅಲ್ಲಿಂದ ಸಿಲಿಗುರಿ ಕಾರಿಡಾರ್ ಅತ್ಯಂತ ಸಮೀಪದಲ್ಲಿದ್ದು, ಭಾರತಕ್ಕೆ ತೀವ್ರ ಭದ್ರತಾ ಕಾಳಜಿ ಉಂಟುಮಾಡಿದೆ. ನೆರೆಹೊರೆಯ ಗಡಿ ಭದ್ರತೆ: ಕಾರಿಡಾರ್ ಸುತ್ತಲೂ ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಗಡಿಗಳಿರುವುದರಿಂದ ಅಕ್ರಮ ನುಸುಳುವಿಕೆ, ಕಳ್ಳಸಾಗಣೆ ಹಾಗೂ ಗಡಿ ಸುರಕ್ಷತೆಯ ಸವಾಲುಗಳಿವೆ. ➤ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಕ್ರಮಗಳು: ಗಡಿ ಬೇಲಿ ನಿರ್ಮಾಣ: ಅಕ್ರಮ ಚಟುವಟಿಕೆ ತಡೆಯಲು BSF ಗೆ ಪಶ್ಚಿಮ ಬಂಗಾಳ ಸರ್ಕಾರವು 120 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ. ಹೆದ್ದಾರಿಗಳ ನಿರ್ವಹಣೆ: ಈ ಪ್ರದೇಶದಲ್ಲಿ ಹಾದುಹೋಗುವ 7 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸುಗಮ ನಿರ್ವಹಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಲಾಗಿದೆ. ಹೊಸ ಕಾನೂನುಗಳ ಜಾರಿ: ಸಭೆಯಲ್ಲಿ ಗಡಿ ಆಡಳಿತ ಹಾಗೂ ಹೊಸ ಕ್ರಿಮಿನಲ್ ಕಾನೂನುಗಳ (Bharatiya Nyaya Sanhita ಇತ್ಯಾದಿ) ಪರಿಣಾಮಕಾರಿ ಅನುಷ್ಠಾನದ ಕುರಿತು ಚರ್ಚಿಸಲಾಗಿದೆ.