Job Description: ➤ ಮುಂಬೈನಲ್ಲಿ ನಡೆದ 2026ರ FISU ವಿಶ್ವ ವಿಶ್ವವಿದ್ಯಾಲಯ ಸ್ಕ್ವಾಷ್ ಚಾಂಪಿಯನ್‌ಶಿಪ್ (FISU World University Squash Championship)ನಲ್ಲಿ ಭಾರತದ ಸ್ಕ್ವಾಷ್ ಆಟಗಾರ ಸೂರಜ್ ಕುಮಾರ್ ಚಂದ್ (Suraj Kumar Chand) ಇತಿಹಾಸ ಬರೆದಿದ್ದಾರೆ. ಸ್ಕ್ವಾಷ್ ಕ್ರೀಡೆಯಲ್ಲಿ ಈ ಪಂದ್ಯಾವಳಿಯ ಪುರುಷರ ವ್ಯಕ್ತಿಗತ (Individual) ವಿಭಾಗದಲ್ಲಿ ಭಾರತಕ್ಕೆ ಇದುವರೆಗೆ ಲಭಿಸಿದ ಮೊದಲ ಚಿನ್ನದ ಪದಕ ಇದಾಗಿದೆ. ಹಿಂದೆ ಭಾರತ ಹಲವು ಪದಕಗಳನ್ನು ಗೆದ್ದಿತ್ತಾದರೂ, ಪುರುಷರ ಸಿಂಗಲ್ಸ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡ ಮೊದಲ ಕ್ರೀಡಾಪಟು ಸೂರಜ್.➤ ಫೈನಲ್ ಪಂದ್ಯದಲ್ಲಿ ಹಂಗೇರಿಯ ಬೆನೆಡೆಕ್ ಟಾಕಾಕ್ಸ್ ವಿರುದ್ಧ ಅತ್ಯಂತ ರೋಚಕವಾಗಿ ಕಾದಾಡಿದ ಸೂರಜ್, 5 ಸೆಟ್‌ಗಳ ಕಠಿಣ ಹೋರಾಟದ ನಂತರ 3-2 ಅಂತರದಲ್ಲಿ ಗೆದ್ದು ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ➤ ಸೂರಜ್ ಕುಮಾರ್ ಚಂದ್: 25 ವರ್ಷ ಪ್ರಾಯದ ಸೂರಜ್ ಕುಮಾರ್, ಮಹಾರಾಷ್ಟ್ರದ ಮುಂಬೈನವರು. ಪ್ರಸ್ತುತ ಮುಂಬೈನ ಸೋಮಯ್ಯ ವಿದ್ಯಾವಿಹಾರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ (ವಿಶೇಷವೆಂದರೆ, ಇದೇ ವಿಶ್ವವಿದ್ಯಾಲಯದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆದಿತ್ತು). ಸೂರಜ್ ಕುಮಾರ್ ಅವರ ಪ್ರಮುಖ ಸಾಧನೆಗಳು: ಶಾಲಾ ರಾಷ್ಟ್ರೀಯ ಕ್ರೀಡಾಕೂಟ: ನ್ಯಾಷನಲ್ ಸ್ಕೂಲ್ ಗೇಮ್ಸ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ. ಜೋಹಾನ್ಸ್‌ಬರ್ಗ್ 2024: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 2024ರ ವಿಶ್ವ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕ. ಎಚ್‌ಸಿಎಲ್ ಪಿಎಸ್‌ಎ ಇಂಡಿಯನ್ ಟೂರ್ (HCL PSA Indian Tour 2026): ಏಪ್ರಿಲ್ 2026 ರಲ್ಲಿ ಚೆನ್ನೈನಲ್ಲಿ ನಡೆದ ಎಚ್‌ಸಿಎಲ್ ಪಿಎಸ್‌ಎ ಟೂರ್‌ನಲ್ಲಿ ಒಂದೇ ಒಂದು ಗೇಮ್ ಸೋಲದೆ ಪ್ರಶಸ್ತಿ ಗೆಲುವು. ಏಷ್ಯನ್ ಗೇಮ್ಸ್ ಆಯ್ಕೆ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ಗಾಗಿ ಭಾರತೀಯ ಪುರುಷರ ತಂಡ ಮತ್ತು ಮಿಕ್ಸೆಡ್ ಡಬಲ್ಸ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.