Job Description: * ಭಾರತದಲ್ಲಿ ಹುಲಿ ಯೋಜನೆಗೆ 50 ವರ್ಷ ಪೂರ್ಣಗೊಂಡಿರುವುದರ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ (International Big Cat Alliance) – ಐಬಿಸಿಎ’ಯನ್ನು ಘೋಷಿಸಿದ್ದಾರೆ.* ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯದಲ್ಲಿ ಸಂಚರಿಸಿ, ಪ್ರಕೃತಿ ಸೌಂದರ್ಯ ಸವಿದರು, ನಂತರ ಇತ್ತೀಚಿಗೆ ಹುಲಿ ಗಣತಿ ವರದಿ ಬಿಡುಗಡೆ ಮಾಡಲು ನರೇಂದ್ರ ಮೋದಿಯವರು ಐಬಿಸಿಎ ಗೆ ಘೋಷಣೆ ಮಾಡಿದ್ದರು. * ವಿಶ್ವದ ಏಳು ‘ದೊಡ್ಡ ಬೆಕ್ಕು’ ಜಾತಿಯ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚಿರತೆಗಳ ಸಂರಕ್ಷಣೆ ಮಾಡುವುದರತ್ತ ಐಬಿಸಿಎ ಗಮನ ಹರಿಸಲಿದೆ ಎಂದು ಮೋದಿಯವರು ಹೇಳಿದರು. ಈ ಜಾತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿರುವ 97 ದೇಶಗಳು ಈ ‘ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿಗೆ ಸೇರಲು ಅವಕಾಶವಿದೆ.