Job Description: ➤ ಭಾರತೀಯ ನೌಕಾಪಡೆಯ ನೇತೃತ್ವದಲ್ಲಿ 4 ದಿನಗಳ ಕಾಲ ನಡೆಯುವ ಬಹುರಾಷ್ಟ್ರೀಯ ಸಾಮುದ್ರಿಕ ಭದ್ರತಾ ತರಬೇತಿ ಕಾರ್ಯಕ್ರಮ ‘ಆಪರೇಷನ್ ಸೌದರ್ನ್ ರೆಡಿನೆಸ್ 26-2’ (Operation Southern Readiness 26-2) ಕೇರಳದ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾಪಡೆ ಕಮಾಂಡ್‌ನಲ್ಲಿ ಪ್ರಾರಂಭವಾಗಿದೆ. ಭಾರತದಲ್ಲಿ ಈ ಸಮರಭ್ಯಾಸ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಇದು ಭಾರತೀಯ ನೌಕಾಪಡೆ ಮತ್ತು ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ (CMF) ನಡುವಿನ ಸಹಯೋಗ ಹಾಗೂ ಪ್ರಾದೇಶಿಕ ಭದ್ರತಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ➤ ಈ ಸಮರಭ್ಯಾಸದ ಪ್ರಮುಖ ಉದ್ದೇಶಗಳು: ಸಾಮುದ್ರಿಕ ಭದ್ರತೆ ಹಾಗೂ ಸಾಮರ್ಥ್ಯ ವೃದ್ಧಿ: ಕೆಂಪು ಸಮುದ್ರ (Red Sea) ಮತ್ತು ಪಶ್ಚಿಮ ಹಿಂದೂ ಮಹಾಸಾಗರ (Western Indian Ocean) ಪ್ರದೇಶಗಳಲ್ಲಿ ಎದುರಾಗುತ್ತಿರುವ ಸಾಮುದ್ರಿಕ ಬೆದರಿಕೆಗಳನ್ನು ಜಂಟಿಯಾಗಿ ಎದುರಿಸುವುದು. ತಾಂತ್ರಿಕ ತರಬೇತಿ: ಹಡಗು ನಿರ್ವಹಣೆ (Ship Handling), ನ್ಯಾವಿಗೇಷನ್, ಆಸ್ಟ್ರೋ ನ್ಯಾವಿಗೇಷನ್, ತುರ್ತು ಸಂವಹನ ವ್ಯವಸ್ಥೆ ಹಾಗೂ ಬೆಂಕಿ ನಂದಿಸುವಿಕೆ (Firefighting) ತರಬೇತಿಗಳನ್ನು ಅತ್ಯಾಧುನಿಕ ಸಿಮ್ಯುಲೇಟರ್‌ಗಳ ಮೂಲಕ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಸಹಕಾರ: ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ಕಚೇರಿ (UNODC) ಸೇರಿದಂತೆ 4 ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. ➤ ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ (CMF): ಇದು ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ನೌಕಾ ಪಾಲುದಾರಿಕೆಯಾಗಿದ್ದು, ಪ್ರಪಂಚದ ಪ್ರಮುಖ ಕಡಲ ಮಾರ್ಗಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ಶ್ರಮಿಸುತ್ತದೆ. ➤ ಕಂಬೈನ್ಡ್ ಟಾಸ್ಕ್ ಫೋರ್ಸ್ 154 (CTF 154): CMF ಅಡಿಯಲ್ಲಿ ಕಾರ್ಯನಿರ್ವಹಿಸುವ ತರಬೇತಿ ವಿಭಾಗವಾಗಿದ್ದು, ಪ್ರಸ್ತುತ ಇದರ ನೇತೃತ್ವವನ್ನು ಭಾರತೀಯ ನೌಕಾಪಡೆ ವಹಿಸಿಕೊಂಡಿದೆ. ಪಾಲುದಾರ ದೇಶಗಳ ನೌಕಾ ಸಿಬ್ಬಂದಿಗೆ ತರಬೇತಿ ನೀಡುವುದು ಇದರ ಮುಖ್ಯ ಕಾರ್ಯವಾಗಿದೆ. ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ