Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಏಪ್ರಿಲ್ 2 ಭಾನುವಾರ ದಿನದಂದು ಪುನರ್‌ ಬಳಕೆಯ ಉಡಾವಣಾ ವಾಹನದ ಪ್ರಯೋಗ ಪರೀಕ್ಷೆಯನ್ನು (ಆರ್‌ಎಲ್‌ವಿ ಎಲ್‌ಇಎಕ್ಸ್) ಯಶಸ್ವಿಯಾಗಿ ಕೈಗೊಂಡಿದೆ.* ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ವೈಮಾನಿಕ ಪರೀಕ್ಷಾ ವಲಯದಲ್ಲಿ (ಎಟಿಆರ್) 'ಚಿನೂಕ್ ಹೆಲಿಕಾಪ್ಟರ್ ಬಳಸಿ ಈ ಪರೀಕ್ಷೆ ಕೈಗೊಳ್ಳಲಾಗಿದೆ. ಡಿಆರ್‌ಡಿಒ ಮತ್ತು ಭಾರತೀಯ ವಾಯು ಪಡೆ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ.* ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಬೆಳಿಗ್ಗೆ 7.10ಕ್ಕೆ 'ಆರ್‌ಎಲ್‌ವಿ' ಟೇಕಾಫ್ ಆಗಿ 4.5 ಕಿ.ಮೀ. ಎತ್ತರದಷ್ಟು ಹಾರಾಟ ನಡೆಸಿದ್ದು, ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಿಂದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಸ್ವಾಯತ್ತ ಲ್ಯಾಂಡಿಂಗ್ ಮಿಷನ್ (RLV LEX) ಅನ್ನು ಯಶಸ್ವಿಯಾಗಿ ಪ್ರಯೋಗ ನಡೆಸಲಾಯಿತು. * ಹೆಲಿಕಾಪ್ಟರ್ ಮೂಲಕ 4.5 ಕಿಮೀ ಎತ್ತರಕ್ಕೆ ಸಾಗಿಸಿ ರನ್‌ವೇಯಲ್ಲಿ ಸ್ವಯಂ 'ಲ್ಯಾಂಡಿಂಗ್ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು ಹಾಗೂ ಇಸ್ರೋ ಅಭಿವೃದ್ಧಿಪಡಿಸಿರುವ ಹಲವು ಸ್ವದೇಶಿ ವ್ಯವಸ್ಥೆಗಳನ್ನು ಎಲ್‌ಇಎಕ್ಸ್' ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.