Job Description: ➤ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games 2026) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹೆಮ್ಮೆಯ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟುಗಳಾದ ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್) ಹಾಗೂ ಲವಿನಾ ಬೊರ್ಗೊಹೈನ್ (ಬಾಕ್ಸಿಂಗ್) ಭಾರತೀಯ ತಂಡದ ಧ್ವಜಧಾರಿಗಳಾಗಿ (Flag and Baton Bearers) ದೇಶವನ್ನು ಮುನ್ನಡೆಸಲಿದ್ದಾರೆ. ➤ ಜುಲೈ 23ರಂದು ನಡೆಯಲಿರುವ ಈ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಮೀರಾಬಾಯಿ ಅವರು ತ್ರಿವರ್ಣ ಧ್ವಜವನ್ನು ಹಿಡಿಯಲಿದ್ದರೆ, ಲವಿನಾ ಅವರು ‘ಕಿಂಗ್ಸ್ ಬ್ಯಾಟನ್’ (Baton) ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ➤ ಇಬ್ಬರು ಪ್ರಖ್ಯಾತ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟುಗಳು ಭಾರತೀಯ ತಂಡವನ್ನು ಮುನ್ನಡೆಸುತ್ತಿರುವುದು ಸಮಸ್ತ ದೇಶವಾಸಿಗಳಿಗೆ ಹೆಮ್ಮೆಯ ವಿಷಯ ಎಂದು 124 ಕ್ರೀಡಾಪಟುಗಳ ತಂಡಕ್ಕೆ ಶುಭಕೋರುತ್ತಾ ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ ತಿಳಿಸಿದ್ದಾರೆ. ➤ ಸೈಖೋಮ್ ಮೀರಾಬಾಯಿ ಚಾನು (Saikhom Mirabai Chanu): ಮಣಿಪುರ ರಾಜ್ಯದ ಸೈಖೋಮ್ ಮೀರಾಬಾಯಿ ಚಾನು ಅವರು 48/49 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಖ್ಯಾತ ವೇಟ್‌ಲಿಫ್ಟಿಂಗ್ ಕ್ರೀಡಾಪಟು. ಪ್ರಮುಖ ಸಾಧನೆಗಳು: ಟೋಕಿಯೋ ಒಲಿಂಪಿಕ್ಸ್ (2021): ಬೆಳ್ಳಿ ಪದಕ. ಕಾಮನ್‌ವೆಲ್ತ್ ಕ್ರೀಡಾಕೂಟ: 2018 (ಗೋಲ್ಡ್ ಕೋಸ್ಟ್) ಮತ್ತು 2022 (ಬರ್ಮಿಂಗ್‌ಹ್ಯಾಮ್) ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತೆ. ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲೂ ಹಲವು ಪದಕಗಳನ್ನು ಗೆದ್ದಿದ್ದಾರೆ. ➤ ಲವಿನಾ ಬೊರ್ಗೊಹೈನ್ (Lovlina Borgohain): ಅಸ್ಸಾಂ ರಾಜ್ಯದ ಒಲಿಂಪಿಕ್ಸ್ ಪದಕ ವಿಜೇತ ಲವಿನಾ ಬೊರ್ಗೊಹೈನ್ ಅವರು 75 ಕೆಜಿ ವಿಭಾಗದ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.ಪ್ರಮುಖ ಸಾಧನೆಗಳು: ಟೋಕಿಯೋ ಒಲಿಂಪಿಕ್ಸ್ (2021): ಕಾಂಸ್ಯ ಪದಕ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್ (2023): ಚಿನ್ನದ ಪದಕ. ಏಷ್ಯನ್ ಗೇಮ್ಸ್ (2023): ಬೆಳ್ಳಿ ಪದಕ.