Job Description: * ಪ್ರಸ್ತುತ ದೇಶದಲ್ಲಿ ಪೋಲಿಯೊವನ್ನು ನಿರ್ಮೂಲನೆಗೆ ಸಹಾಯ ಮಾಡುವ ಪ್ರಯತ್ನಗಳಿಗಾಗಿ ಮೈಕ್ರೋಸಾಫ್ಟ್ ಸೃಷ್ಟಿಕರ್ತ ಬಿಲ್ ಗೇಟ್ಸ್ ಅವರು ಪಾಕಿಸ್ತಾನದ 2 ನೇ ಅತ್ಯುನ್ನತ ನಾಗರಿಕ ಗೌರವವಾಗಿರುವ ಹಿಲಾಲ್-ಎ-ಪಾಕಿಸ್ತಾನವನ್ನು ಪಡೆದುಕೊಂಡಿದ್ದಾರೆ. * ಪಾಕಿಸ್ತಾನದಲ್ಲಿನ ಪೋಲಿಯೊ ನಿರ್ಮೂಲನೆ ಹಾಗೂ ಕೋವಿಡ್-19 ಪ್ರತಿಕ್ರಿಯೆಯ ಬಗ್ಗೆ ವಿವರಿಸಿದ ಬಿಲ್ ಗೇಟ್ಸ್ ಅವರಿಗೆ ಗೌರವ ಸಮರ್ಪಣೆಗಾಗಿ ಇತ್ತೀಚಿಗೆ ಪಾಕಿಸ್ತಾನಿ ಪ್ರಧಾನ ಮಂತ್ರಿಯ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಪ್ರಸ್ತುತ ಜಾಗತಿಕ ಪೋಲಿಯೊ ನಿರ್ಮೂಲನೆಗೆ ಪ್ರಮುಖ ದಾನಿಯಾಗಿರುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್. * ಪ್ರಸ್ತುತ ಬಿಲ್ ಗೇಟ್ಸ್ ರವರ ಯೋಜನೆ ಹಾಗೂ ಅಭಿವೃದ್ಧಿ ಸಚಿವ ಮತ್ತು NCOC ನ ನಿರ್ದೇಶಕರಾಗಿರುವ ಅಸದ್ ಉಮರ್ ಅವರು ಪಾಕಿಸ್ತಾನ ಪ್ರಧಾನ ಮಂತ್ರಿಯವರ ಆರೋಗ್ಯದ ವಿಶೇಷ ಸಹಾಯಕರಾದ ಡಾ. ಫೈಸಲ್ ಸುಲ್ತಾನ್ ಅವರನ್ನು ಭೇಟಿಯಾಗಿದ್ದಾರೆ. * NCOC ನ ನಿರ್ದೇಶಕರಾಗಿರುವ ಅಸದ್ ಉಮರ್ ಅವರು NCOC ಯ ಕಾರ್ಯವನ್ನು ಹಾಗೂ ಕೋವಿಡ್ -19 ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅದರ ಸಾಧನೆ ಹಾಗೂ ಸೋಂಕು ಹರಡುವುದನ್ನು ತಡೆಗಟ್ಟಲು ಔಷಧೇತರ ಉಪಕ್ರಮಗಳ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. * GAVI ಇದೊಂದು ಸಾರ್ವಜನಿಕ-ಖಾಸಗಿ ಜಾಗತಿಕ ಆರೋಗ್ಯ ಸಹಯೋಗವಾಗಿದೆ, ಕಡಿಮೆ-ಆದಾಯವನ್ನು ಹೊಂದಿರುವ ದೇಶಗಳಿಗೆ ವ್ಯಾಕ್ಸಿನೇಷನ್ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ GAVI ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. * * ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನ್ನು : ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಫ್ರೆಂಚ್ ಗೇಟ್ಸ್ ರಚಿಸಿರುವ ಅಮೇರಿಕನ್ ಖಾಸಗಿ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು 2000 ರಲ್ಲಿ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಯು 2020 ರ ಅವಧಿಗೆ 49.8 ಶತಕೋಟಿ ಆಸ್ತಿಯನ್ನು ಹೊಂದಿರುವ ವಿಶ್ವದ 2 ನೇ ಅತಿದೊಡ್ಡ ಚಾರಿಟಿ ಫೌಂಡೇಶನ್ ಆಗಿದೆ. * ಈ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಪಂಚದಾದ್ಯಂತ ಇರುವ ತೀವ್ರ ಬಡತನವನ್ನು ಕಡಿಮೆ ಮಾಡುವ ಯೋಜನೆಯನ್ನು ಹೊಂದಿದೆ.