Job Description: * ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಫೆಬ್ರವರಿ. 15 ನ್ನು ಬಿಹಾರ್ ನ 'ಶಾಹಿದ್ ದಿವಸ್' ಎಂದು ಸ್ಮರಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. * ಈ ಹಿಂದೆ ಸರಿ ಸುಮಾರು 90 ವರ್ಷಗಳ ಹಿಂದೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿನ ತಾರಾಪುರ ಪಟ್ಟಣದಲ್ಲಿ ಪೊಲೀಸರಿಂದ ಹತ್ಯೆಗೀಡಾದ 34 ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ಸಲ್ಲಿಸಲು ಫೆಬ್ರವರಿ. 15 ನ್ನು 'ಶಾಹಿದ್ ದಿವಸ್' ಎಂದು ಸ್ಮರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಹಿಂದೆ 1919 ರಲ್ಲಿ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ನಂತರ ಬ್ರಿಟಿಷ್ ಪೋಲೀಸರು ನಡೆಸಿರುವ ಅತಿದೊಡ್ಡ ಹತ್ಯಾಕಾಂಡ ಇದಾಗಿದೆ, ಆದರೆ ಈ ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಹಕ್ಕು ಲಭಿಸಲಿಲ್ಲ. * ಕಳೆದ ವರ್ಷ 2021 ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಬಿಹಾರದ ತಾರಾಪುರ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದರು. ಈ ತಾರಾಪುರ ಹತ್ಯಾಕಾಂಡ ಘಟನೆಯು ತಾರಾಪುರದ ಠಾಣಾ ಭವನದಲ್ಲಿ 'ಭಾರತದ ರಾಷ್ಟ್ರಧ್ವಜ'ವನ್ನು 1932 ರ ಫೆಬ್ರವರಿ. 15 ರಂದು ಹಾರಿಸಲು ಯುವ ಸ್ವಾತಂತ್ರ್ಯ ಹೋರಾಟಗಾರರ ಗುಂಪುನ್ನು ಆ ಪ್ರದೇಶದಲ್ಲಿ ನಿಯೀಜಿಸಿದಾಗ ಜರುಗಿದೆ. ಈ ಸಂಧರ್ಭದಲ್ಲಿ ಪೊಲೀಸರು ಅವರ ಮೇಲೆ ಅಮಾನುಷ ಲಾಠಿ ಪ್ರಹಾರವನ್ನು ನಡೆಸಿದರು, ಆದರೆ ಅವರಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ಸಿಂಗ್ ಠಾಣಾ ಭವನದಲ್ಲಿ ಧ್ವಜಾರೋಹಣವನ್ನು ಮಾಡಿದರು. * ಸ್ವಾತಂತ್ರ್ಯ ಹೋರಾಟಗಾರರ ಎರಡು ಚಟುವಟಿಕೆ ಕೇಂದ್ರಗಳಿದ್ದವು - ತಾರಾಪುರ ಬಳಿಯ ಧೋಲ್ ಪಹಾಡಿ, - ಸಂಗ್ರಾಮ್‌ಪುರದ ಸುಪೌರ್-ಜಮುವಾ ಗ್ರಾಮ. * ಈ ಹಿಂದೆ 1967 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ತಾರಾಪುರದ ಶಾಸಕ ಬಿ ಎನ್ ಪ್ರಶಾಂತ್ ಅವರು ಈ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಲಾರಂಭಿಸಿದರು. ಮತ್ತೇ ಚಂದ್ರಶೇಖರ ಸಿಂಗ್ ಸರ್ಕಾರವು 1984 ರಲ್ಲಿ ಠಾಣಾ ಭವನದ ಮುಂಭಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲು 100 ಚದರ ಅಡಿ ಭೂಮಿಯನ್ನು ನೀಡಿತು. ಹಾಗೂ ಆ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಹೊಂದಿರುವ ಅಮೃತಶಿಲೆಯ ಫಲಕವನ್ನು ಸ್ಥಾಪನೆ ಮಾಡಿದರು.