Job Description: ➤ ಜಾಗತಿಕ ಕೃತಕ ಬುದ್ಧಿಮತ್ತೆ (AI) ದೈತ್ಯ ಸಂಸ್ಥೆಯಾದ ಓಪನ್ಎಐ (OpenAI) ತನ್ನ ಅತ್ಯಂತ ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಯಾದ 'GPT-5.6' ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಅಮೆರಿಕ (US) ಸರ್ಕಾರದಿಂದ ಅಧಿಕೃತ ಅನುಮೋದನೆ ಪಡೆದುಕೊಂಡಿದೆ. ಭದ್ರತಾ ಕಾರಣಗಳಿಗಾಗಿ ಕಳೆದ ತಿಂಗಳು ವಿಧಿಸಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಅಮೆರಿಕದ ವಾಣಿಜ್ಯ ಇಲಾಖೆ (Department of Commerce) ಈಗ ತೆರವುಗೊಳಿಸಿದೆ.➤ ಕಳೆದ ಜೂನ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಸೈಬರ್ ಭದ್ರತೆಯ (Cybersecurity) ಹಿತದೃಷ್ಟಿಯಿಂದ GPT-5.6 ಮಾದರಿಯ ಮುಕ್ತ ಬಿಡುಗಡೆಗೆ ತಡೆ ನೀಡಿತ್ತು. ಇದನ್ನು ಕೇವಲ ಸರ್ಕಾರ ಅನುಮೋದಿಸಿದ ಕೆಲವು ಆಯ್ದ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಲು (Staggered Rollout) ಸೂಚಿಸಲಾಗಿತ್ತು. ಆದರೆ, ಈಗ ಓಪನ್ಎಐ ಸಂಸ್ಥೆಯು ಸರ್ಕಾರದ 'ಸೆಂಟರ್ ಫಾರ್ ಎಐ ಸ್ಟ್ಯಾಂಡರ್ಡ್ಸ್ ಅಂಡ್ ಇನ್ನೋವೇಶನ್' (Center for AI Standards and Innovation) ಸಂಸ್ಥೆಯೊಂದಿಗೆ ಹೆಚ್ಚುವರಿ ಸುರಕ್ಷತಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ ಗ್ರೀನ್ ಸಿಗ್ನಲ್ ಸಿಕ್ಕಿದೆ.➤ GPT-5.6 ಸರಣಿಯ ಪ್ರಮುಖ ಮೂರು ಮಾದರಿಗಳು Sol (ಸಾಲ್): ಇದು ಈ ಸರಣಿಯ ಅತ್ಯಂತ ಶಕ್ತಿಶಾಲಿ (Flagship) ಮಾಡೆಲ್ ಆಗಿದ್ದು, ಕೋಡಿಂಗ್, ಜೀವವಿಜ್ಞಾನ (Biology) ಮತ್ತು ಸೈಬರ್ ಭದ್ರತೆಯ ಸಂಶೋಧನೆಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. Terra (ಟೆರ್ರಾ): ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಹಳೆಯ GPT-5.5 ನಷ್ಟೇ ವೇಗ ಹಾಗೂ ಸಾಮರ್ಥ್ಯವನ್ನು ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ನೀಡುತ್ತದೆ. Luna (ಲೂನಾ): ಇದು ಅತ್ಯಂತ ವೇಗವಾದ ಮತ್ತು ಕಡಿಮೆ ಬಜೆಟ್‌ನ ಆವೃತ್ತಿಯಾಗಿದೆ. ➤ ಓಪನ್ಎಐ ಸಂಸ್ಥೆಗೆ ಪೈಪೋಟಿ ನೀಡಲು 'ಆಂಥ್ರೋಪಿಕಲ್' (Anthropic) ಸಂಸ್ಥೆಯು Claude Fable ಮತ್ತು Mythos ಮಾಡೆಲ್‌ಗಳನ್ನು ಮಾರುಕಟ್ಟೆಗೆ ತಂದಿದೆ. ಮತ್ತೊಂದೆಡೆ ಚೀನಾ ದೇಶವು ತನ್ನದೇ ಆದ ಮುಕ್ತ ಆವೃತ್ತಿಯ 'GLM 5.2' ಅನ್ನು ಬಿಡುಗಡೆ ಮಾಡಿ ಜಾಗತಿಕವಾಗಿ ಪೈಪೋಟಿ ನೀಡುತ್ತಿದೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ