Job Description: ➤ ಕರ್ನಾಟಕ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence) ಶಿಕ್ಷಣವನ್ನು ತಲುಪಿಸುವ ಸಲುವಾಗಿ 'ಕಿಯೋ ಎಐ ಪಿಸಿ' (KEO AI PC) ಎಂಬ ಅತ್ಯಾಧುನಿಕ ಹಾಗೂ ಕೈಗೆಟುಕುವ ದರದ ಕಂಪ್ಯೂಟರ್ ಸಾಧನವನ್ನು ಲೋಕಾರ್ಪಣೆ ಮಾಡಿದೆ.➤ KEO ಎಂದರೆ: K - Knowledge-driven (ಜ್ಞಾನ ಆಧಾರಿತ) E - Economical (ಕೈಗೆಟುಕುವ/ಆರ್ಥಿಕ) O - Open-source (ಮುಕ್ತ ಆಕರ ತಂತ್ರಜ್ಞಾನ) ಇದು ಮುಕ್ತ ಆಕರ (Open-source) RISC-V ಪ್ರೊಸೆಸರ್ ಮತ್ತು ಅನ್-ಡಿವೈಸ್ (On-device) AI ಸಾಮರ್ಥ್ಯ ಹೊಂದಿರುವ ಭಾರತದ ಮೊದಲ ದರ್ಜೆಯ ಮಿತವ್ಯಯಿ ಕಂಪ್ಯೂಟರ್ ಸಾಧನವಾಗಿದೆ. ➤ ಯೋಜನೆಯ ಪ್ರಮುಖ ಮುಖ್ಯಾಂಶಗಳು: ಅಭಿವೃದ್ಧಿಪಡಿಸಿದ ಸಂಸ್ಥೆ: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ವಿಕಾಸ ನಿಗಮ ನಿಯಮಿತ (KEONICS - ಕಿಯೋನಿಕ್ಸ್). ಉದ್ಘಾಟನೆ: ಉಪಮುಖ್ಯಮಂತ್ರಿ (ಹಾಗೂ ಸಿಎಂ) ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಈ ಸಾಧನವನ್ನು ಲೋಕಾರ್ಪಣೆಗೊಳಿಸಿದರು. ಉಪಸ್ಥಿತರಿದ್ದ ಗಣ್ಯರು: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರಣ್ ಬಚ್ಚೇಗೌಡ. ಮೊದಲ ಹಂತದ ಗುರಿ:- ಆರಂಭಿಕ ಹಂತವಾಗಿ 1,000 ಕಿಯೋ ಎಐ ಪಿಸಿಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು.- ಶಿಕ್ಷಣ ಫೌಂಡೇಶನ್ ಸಹಯೋಗದೊಂದಿಗೆ 2,222 ಪಿಸಿಗಳನ್ನು 31 ಜಿಲ್ಲೆಗಳ 239 ತಾಲೂಕುಗಳಲ್ಲಿ ವಿತರಿಸುವ ಯೋಜನೆ ಹೊಂದಿದೆ.- ಒಟ್ಟಾರೆಯಾಗಿ 1,912 ಕಂಪ್ಯೂಟರ್‌ಗಳನ್ನು ಜ್ಞಾನ/ಅರಿವು ಕೇಂದ್ರಗಳಿಗೆ (ತಲಾ 8 ರಂತೆ) ಮತ್ತು ಆದರ್ಶ ವಸತಿ ಶಾಲೆಗಳಿಗೆ (KREIS) ಅಳವಡಿಸಲಾಗುವುದು. ➤ KEO AI PC ಯ ತಾಂತ್ರಿಕ ವಿಶೇಷತೆಗಳು: ಇಂಟರ್ನೆಟ್ ಇಲ್ಲದೆಯೂ AI ಕೆಲಸ ಮಾಡುತ್ತೆ: ಸಾಂಪ್ರದಾಯಿಕ ಕಂಪ್ಯೂಟರ್‌ಗಳಂತೆ ಕ್ಲೌಡ್‌ಗೆ ಸಂಪರ್ಕ ಹೊಂದುವ ಅಗತ್ಯವಿಲ್ಲದೆ, ಸಾಧನದ ಒಳಗೇ ಇರುವ (On-device) AI ವೇಗವರ್ಧಕದ (Accelerator) ಮೂಲಕ ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಆಪರೇಟಿಂಗ್ ಸಿಸ್ಟಮ್ & ಹಾರ್ಡ್‌ವೇರ್: ಓಪನ್ ಸೋರ್ಸ್ ಹಾರ್ಡ್‌ವೇರ್ ಮತ್ತು RISC-V ಆರ್ಕಿಟೆಕ್ಚರ್. ವಿದ್ಯಾರ್ಥಿ ಕಲಿಕಾ ಅಂಶಗಳು: ಕೋಡಿಂಗ್ (Coding), ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (Machine Learning) ಹಾಗೂ ಎಲೆಕ್ಟ್ರಾನಿಕ್ಸ್ ಕೌಶಲಗಳನ್ನು ತರಗತಿಯ ಮಟ್ಟದಲ್ಲೇ ಕಲಿಯಬಹುದು. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ