Job Description: ➤ ಭಾರತದ ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ತಯಾರಿಕೆಯನ್ನು (Indigenous Defence Manufacturing) ಉತ್ತೇಜಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. DRDO ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಶಾಖಪಟ್ಟಣಂನ 'ನೇಪಲ್ ಸೈನ್ಸ್ & ಟೆಕ್ನಾಲಜಿಕಲ್ ಲ್ಯಾಬೊರೇಟರಿ' (NSTL) ಎರಡು ಪ್ರಮುಖ 'ತಂತ್ರಜ್ಞಾನ ವರ್ಗಾವಣೆ ಲೈಸೆನ್ಸಿಂಗ್ ಒಪ್ಪಂದಗಳಿಗೆ' (LAToT - Licensing Agreements for Transfer of Technology) ಸಹಿ ಹಾಕಿದೆ.➤ ಪ್ರಮುಖ ಒಪ್ಪಂದಗಳ ವಿವರಗಳು: ಸಬ್‌ಮರೀನ್ ಫೈರ್ಡ್ ಡಿಕಾಯ್ (SFD): DRDO ಸಂಸ್ಥೆಯು 'ಸಬ್‌ಮರೀನ್ ಫೈರ್ಡ್ ಡಿಕಾಯ್' ತಂತ್ರಜ್ಞಾನವನ್ನು ಸಾರ್ವಜನಿಕ ವಲಯದ ಪ್ರಮುಖ ರಕ್ಷಣಾ ಸಂಸ್ಥೆಯಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಗೆ ವರ್ಗಾಯಿಸಿದೆ. ಈ ತಂತ್ರಜ್ಞಾನವನ್ನು ಜಲಾಂತರ್ಗಾಮಿ ನೌಕೆಗಳ ಸ್ವಯಂ ರಕ್ಷಣೆಗಾಗಿ ಹಾಗೂ ಶತ್ರುಗಳ ಟಾರ್ಪಿಡೊ ದಾಳಿಯಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತದೆ. LM2500 ಗ್ಯಾಸ್ ಟರ್ಬೈನ್ ತಂತ್ರಜ್ಞಾನ: DRDO ತನ್ನ 'LM2500 ಗ್ಯಾಸ್ ಟರ್ಬೈನ್' ತಂತ್ರಜ್ಞಾನದ ಫ್ಯಾಬ್ರಿಕೇಶನ್, ಇನ್‌ಸ್ಟಾಲೇಶನ್ ಮತ್ತು ಕಮಿಷನಿಂಗ್ ಹಕ್ಕುಗಳನ್ನು ಖಾಸಗಿ ಸಂಸ್ಥೆಯಾದ ವರ್ಟೆಕ್ಸ್ ಇಂಜಿನಿಯರಿಂಗ್ ಸಿಸ್ಟಮ್ಸ್‌ಗೆ ಹಸ್ತಾಂತರಿಸಿದೆ. ಈ ತಂತ್ರಜ್ಞಾನವನ್ನು ನೌಕಾಪಡೆಯ ಬೃಹತ್ ಯುದ್ಧನೌಕೆಗಳ ಇಂಜಿನ್ ಚಾಲನೆ (Naval Propulsion) ಮತ್ತು ಕೈಗಾರಿಕಾ ಅನ್ವಯಿಕೆಗಳಿಗಾಗಿ ಬಳಸಲಾಗುತ್ತದೆ. ➤ LM2500 ಗ್ಯಾಸ್ ಟರ್ಬೈನ್ (LM2500 Gas Turbine): ಉತ್ಪಾದನಾ ಸಂಸ್ಥೆ: ಖಾಸಗಿ ವಲಯದ ವರ್ಟೆಕ್ಸ್ ಇಂಜಿನಿಯರಿಂಗ್ ಸಿಸ್ಟಮ್ಸ್ (Vertex Engineering Systems Pvt. Ltd.) ಸಂಸ್ಥೆಗೆ ಇದನ್ನು ಹಸ್ತಾಂತರಿಸಲಾಗಿದೆ. ಕಾರ್ಯವೈಖರಿ: LM2500 ಗ್ಯಾಸ್ ಟರ್ಬೈನ್ ಅನ್ನು ಮುಖ್ಯವಾಗಿ ನೌಕಾಪಡೆಯ ಬೃಹತ್ ಯುದ್ಧನೌಕೆಗಳ ಇಂಜಿನ್‌ಗಳಿಗೆ (Propulsion Systems) ಬಳಸಲಾಗುತ್ತದೆ. ಭಾರತದಲ್ಲೇ ಇದರ ಫ್ಯಾಬ್ರಿಕೇಶನ್ ಮತ್ತು ಸ್ಥಾಪನೆಗೆ ಇದು ಹಾದಿಮಾಡಿಕೊಡುತ್ತದೆ. ➤ LAToT (Licensing Agreement for Transfer of Technology) ಎಂಬುದು ಒಂದು ಸಂಶೋಧನಾ ಸಂಸ್ಥೆಯು ತಾನು ಸಂಶೋಧಿಸಿದ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಅಥವಾ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಕೈಗಾರಿಕಾ ಸಂಸ್ಥೆಗಳಿಗೆ ನೀಡುವ ಕಾನೂನಾತ್ಮಕ ಒಪ್ಪಂದವಾಗಿದೆ. ಉದ್ದೇಶ: DRDO ಸಂಶೋಧಿಸಿದ ವಿನ್ಯಾಸಗಳನ್ನು ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ಕೈಗಾರಿಕೆಗಳು ಉತ್ಪಾದಿಸಿ, ಭಾರತೀಯ ಸಶಸ್ತ್ರ ಪಡೆಗಳಿಗೆ ಪೂರೈಸಲು ಸಹಾಯ ಮಾಡುವುದು. ಪ್ರಯೋಜನ: ಇದು ದೇಶೀಯ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಿ, 'ಆತ್ಮನಿರ್ಭರ ಭಾರತ' (Aatmanirbhar Bharat) ಯೋಜನೆಯನ್ನು ಸಾಕಾರಗೊಳಿಸುತ್ತದೆ.