Job Description: ➤ ಭಾರತವನ್ನು ಜಾಗತಿಕ ಇಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ತಯಾರಿಕೆಯ ಪ್ರಮುಖ ಕೇಂದ್ರವನ್ನಾಗಿ (Global Electronics Hub) ಮಾಡಲು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ₹62,500 ಕೋಟಿ ವೆಚ್ಚದ ಹೊಸ 'ಮೊಬೈಲ್ ಫೋನ್ ಉತ್ಪಾದನಾ ಯೋಜನೆ'ಯನ್ನು (Mobile Phone Manufacturing Scheme) ಅಧಿಕೃತವಾಗಿ ಜಾರಿಗೆ ತಂದಿದೆ.➤ ಹಳೆಯ 'ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI Scheme)' ಯೋಜನೆಯ ಬದಲಿಗೆ ಈ ನೂತನ ಯೋಜನೆಯನ್ನು ಪರಿಚಯಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ.➤ ಯೋಜನೆಯ ಪ್ರಮುಖ ಎರಡು ಹಂತಗಳು: 1. ಟಾರ್ಗೆಟ್ ವಿಭಾಗ - 1 (ಆಗಾಧ ಪ್ರಮಾಣದ ಮತ್ತು ಜಾಗತಿಕ ಸಂಸ್ಥೆಗಳು) ಅರ್ಹತೆ: 2025-26ರ ಆರ್ಥಿಕ ವರ್ಷದಲ್ಲಿ ಕನಿಷ್ಠ ₹10,000 ಕೋಟಿ ವಾರ್ಷಿಕ ವಹಿವಾಟು (Turnover) ಹೊಂದಿರುವ ಬೃಹತ್ ಕಂಪನಿಗಳು. ಪ್ರೋತ್ಸಾಹ ಧನ (Incentive): ಉತ್ಪಾದನೆಯ ಆಧಾರದ ಮೇಲೆ ಶೇಕಡಾ 2.25% ರಿಂದ 5% ವರೆಗೆ ಬೇಸ್ ಇನ್ಸೆಂಟಿವ್ ನೀಡಲಾಗುತ್ತದೆ. 2. ಟಾರ್ಗೆಟ್ ವಿಭಾಗ - 2 (ದೇಶೀಯ/ಭಾರತೀಯ ಬ್ರ್ಯಾಂಡ್‌ಗಳು): ಅರ್ಹತೆ: ಕನಿಷ್ಠ ₹1,000 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಭಾರತೀಯ ಕಂಪನಿಗಳು. ಪ್ರೋತ್ಸಾಹ ಧನ: ನೇರ 5% ಪ್ರೋತ್ಸಾಹ ಧನ. ಆರ್‌ಆಂಡ್‌ಡಿ (R&D) ಬೋನಸ್: ಭಾರತದಲ್ಲೇ ವಿನ್ಯಾಸ (Design) ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ (R&D) ಮಾಡುವ ಕಂಪನಿಗಳಿಗೆ ಹೆಚ್ಚುವರಿಯಾಗಿ 3% ಬೋನಸ್ ಪ್ರೋತ್ಸಾಹಕ ನೀಡಲಾಗುತ್ತದೆ. ➤ ದೇಶೀಯ ಬಿಡಿಭಾಗಗಳ ಬಳಕೆಗೆ ಹೆಚ್ಚುವರಿ ಪ್ರೋತ್ಸಾಹಕ: ಭಾರತದಲ್ಲೇ ಬಿಡಿಭಾಗ ತಯಾರಿಕೆಗೆ (Component Ecosystem) ಉತ್ತೇಜನ ನೀಡಲು, ಯಾವುದೇ ಸಂಸ್ಥೆಯು ಶೇಕಡಾ 25% ಕ್ಕಿಂತ ಹೆಚ್ಚು ಸ್ಥಳೀಯ/ದೇಶೀಯ ಬಿಡಿಭಾಗಗಳನ್ನು ಬಳಸಿ ಮೊಬೈಲ್ ತಯಾರಿಸಿದರೆ ಅವರಿಗೆ ಹೆಚ್ಚುವರಿಯಾಗಿ 1.5% ವರೆಗೆ ಇನ್ಸೆಂಟಿವ್ ದೊರೆಯಲಿದೆ.