Job Description: ➤ ಪಾಕಿಸ್ತಾನ ಸರ್ಕಾರವು ಭಾರತದ ಮುಂಬೈ ಮೂಲದ ಇಬ್ಬರು ಪಾರ್ಸಿ ವೈದ್ಯರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ನಿಶಾನ್-ಎ-ಇಮ್ತಿಯಾಜ್' (Nishan-e-Imtiaz) ಪ್ರಶಸ್ತಿಯನ್ನು ಘೋಷಿಸಿದೆ. ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಮಾರಣಾಂತಿಕ ಕಾಯಿಲೆಯ ರಹಸ್ಯವನ್ನು ಕಾಪಾಡಿದ್ದಕ್ಕಾಗಿ ಹಾಗೂ ಅವರ ವೈದ್ಯಕೀಯ ಸೇವೆಗಾಗಿ ಈ ಗೌರವವನ್ನು ನೀಡಲಾಗುತ್ತಿದೆ.➤ ಗೌರವಕ್ಕೆ ಪಾತ್ರರಾದ ವೈದ್ಯರು: ಡಾ. ಜಲ್ ರತನ್‍ಜಿ ಪಟೇಲ್ (Dr. Jal Ratanji Patel): ಸಮಾಜ ಸೇವಕ ಮತ್ತು ವೈದ್ಯ (Physician). ಡಾ. ಜಲ್ ಧೇಭೋ-ಕೂ (Dr. Jal Dhaybho-Koo): ವಿಕಿರಣಶಾಸ್ತ್ರಜ್ಞ (Radiologist). ➤ ಹಿನ್ನೆಲೆ ಹಾಗೂ ಇತಿಹಾಸ: 1946 ರಲ್ಲಿ (ಭಾರತ ವಿಭಜನೆಗೂ ಮುನ್ನ) ಮುಂಬೈನಲ್ಲಿ ಈ ಇಬ್ಬರು ವೈದ್ಯರು ಮುಹಮ್ಮದ್ ಅಲಿ ಜಿನ್ನಾ ಅವರ ಎಕ್ಸ್-ರೇ (X-ray) ಮತ್ತು ವೈದ್ಯಕೀಯ ತಪಾಸಣೆ ನಡೆಸಿದ್ದರು. ತಪಾಸಣೆ ವೇಳೆ ಜಿನ್ನಾ ಅವರಿಗೆ ಕ್ಷಯರೋಗ (Tuberculosis - TB) ತೀವ್ರ ಸ್ವರೂಪದಲ್ಲಿದ್ದು, ಅವರು ಇನ್ನು 1 ರಿಂದ 2 ವರ್ಷ ಮಾತ್ರ ಬದುಕುತ್ತಾರೆ ಎಂಬ ಅಂಶ ತಿಳಿದುಬಂದಿತ್ತು. ಬ್ರಿಟಿಷರಿಗೆ ಅಥವಾ ಕಾಂಗ್ರೆಸ್ ನಾಯಕರಿಗೆ ಈ ವಿಷಯ ತಿಳಿದರೆ ಭಾರತದ ವಿಭಜನೆ ಮತ್ತು ಪಾಕಿಸ್ತಾನ ರಚನೆಯ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು ಎಂದು, ಈ ವೈದ್ಯರು ವೈದ್ಯಕೀಯ ನಿಯಮಾವಳಿಯಂತೆ ಈ ಮಾಹಿತಿಯನ್ನು ಅತ್ಯಂತ ರಹಸ್ಯವಾಗಿಟ್ಟಿದ್ದರು. ಈ ಐತಿಹಾಸಿಕ ಘಟನೆಯನ್ನು ಲಾರಿ ಕಾಲಿನ್ಸ್ ಮತ್ತು ಡೊಮಿನDominique Lapierre ಬರೆದ ಪ್ರಸಿದ್ಧ ಪುಸ್ತಕ ‘ಫ್ರೀಡಂ ಅಟ್ ಮಿಡ್‌ನೈಟ್’ (Freedom at Midnight) ನಲ್ಲೂ ಉಲ್ಲೇಖಿಸಲಾಗಿದೆ. ➤ ಪ್ರಶಸ್ತಿ ಪ್ರದಾನ: ಈ ಅತ್ಯುನ್ನತ ‘ನಿಶಾನ್-ಎ-ಇಮ್ತಿಯಾಜ್’ ಗೌರವವನ್ನು ಬರುವ ಮಾರ್ಚ್ 23 (ಪಾಕಿಸ್ತಾನ ದಿನ - Pakistan Day) ರಂದು ನಡೆಯಲಿರುವ ಅಧಿಕೃತ ಅಧ್ಯಕ್ಷೀಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.