Job Description: ➤ ಆಫ್ರಿಕಾ ಖಂಡದ ಸೋಮಾಲಿಯಾ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ (Pirates) ಉಪಟಳ ಮತ್ತೆ ಹೆಚ್ಚಾಗಿದ್ದು, M/V LUTUF ಎಂಬ ಕ್ಯಾಮರೂನ್ ಧ್ವಜವನ್ನು ಹೊಂದಿದ್ದ ಸರಕು ಸಾಗಣೆ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಹಡಗು ಸೋಮಾಲಿಯಾದ ರಾಜಧಾನಿ ಮೊಗದಿಶುದಲ್ಲಿರುವ ಟರ್ಕಿಶ್ ಮಿಲಿಟರಿ ತರಬೇತಿ ಕೇಂದ್ರಕ್ಕೆ ಸೇನಾ ಶಸ್ತ್ರಾಸ್ತ್ರಗಳು, ಸಂವಹನ ಸಾಮಗ್ರಿಗಳು ಮತ್ತು ಉಪಗ್ರಹ ಉಪಕರಣಗಳನ್ನು ಒಯ್ಯುತ್ತಿತ್ತು.➤ ಹಡಗಿನಲ್ಲಿದ್ದ ಸಿಬ್ಬಂದಿ ವಿವರ: ಹಡಗಿನಲ್ಲಿ ಒಟ್ಟು 10 ಜನರು ಪ್ರಯಾಣಿಸುತ್ತಿದ್ದರು: ಭಾರತೀಯರು: 6 ನಾವಿಕರು ಟರ್ಕಿ ಪ್ರಜೆ: 1 ಜಾರ್ಜಿಯಾ ಪ್ರಜೆ: 1 ಸೆರ್ಬಿಯಾದ ಭದ್ರತಾ ಸಿಬ್ಬಂದಿ: 2 ➤ ದಾಳಿ ನಡೆದದ್ದು ಹೇಗೆ? ಸ್ಥಳ: ಪುಂಟ್‌ಲ್ಯಾಂಡ್‌ನ ಐಲ್ (Eyl) ಜಿಲ್ಲೆಯ ಮರ್ರಾಯಾ (Marraya) ಕರಾವಳಿಯಿಂದ ಸುಮಾರು 3.5 ಸಾಗರ ಮೈಲಿ (Nautical Miles) ದೂರದಲ್ಲಿ ಹಡಗನ್ನು ವಶಕ್ಕೆ ಪಡೆಯಲಾಯಿತು. ದಾಳಿಕೋರರು: ಸುಮಾರು 8 ಜನರಿದ್ದ ಕಡಲ್ಗಳ್ಳರ ಗುಂಪು ಈ ಕೃತ್ಯ ಎಸಗಿದೆ. ಇವರು ಈ ಹಿಂದೆ ಅಪ್ರಿಲ್ 26 ರಂದು ನಡೆದಿದ್ದ 'M/V Sward' ಹಡಗು ಅಪಹರಣ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು ಶಂಕಿಸಲಾಗಿದೆ. ಟರ್ಕಿ ಸೇನೆಯ ಮೇಲ್ವಿಚಾರಣೆ: ಹಡಗು ಅಪಹರಣಗೊಂಡ ನಂತರ ಟರ್ಕಿಯ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಆ ಪ್ರದೇಶದ ಮೇಲೆ ನಿಗಾ ವಹಿಸಿದ್ದು, ಎರಡು ಟರ್ಕಿಶ್ ಹಡಗುಗಳು ಆ ಭಾಗಕ್ಕೆ ಧಾವಿಸಿವೆ.