Job Description: ➤ ಭಾರತವು 2026ರ ಬ್ರಿಕ್ಸ್ (BRICS) ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಇದರ ಭಾಗವಾಗಿ 12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆ (12th BRICS Environment Ministers' Meeting) ಯನ್ನು ನವದೆಹಲಿಯಲ್ಲಿ ಆಯೋಜಿಸಿದೆ. ಅಧ್ಯಕ್ಷತೆ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್ ಮುಖ್ಯ ಧ್ಯೇಯವಾಕ್ಯ (Theme): "ಸ್ಥಿತಿ ಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ("Building for Resilience, Innovation, Cooperation and Sustainability") ಪೂರ್ವಭಾವಿ ಸಭೆ: ಸಚಿವರ ಸಭೆಗೂ ಮುನ್ನ ಸೋಮವಾರದಂದು ಪರಿಸರ ಕಾರ್ಯಪಡೆ (Environment Working Group) ಮತ್ತು ಹವಾಮಾನ ಬದಲಾವಣೆ ಹಾಗೂ ಸುಸ್ಥಿರ ಅಭಿವೃದ್ಧಿ ಸಂಪರ್ಕ ಗುಂಪಿನ ಹಿರಿಯ ಅಧಿಕಾರಿಗಳ ಸಭೆ ತನ್ಮಯ್ ಕುಮಾರ್ (ಕಾರ್ಯದರ್ಶಿ, MoEFCC) ಅವರ ನೇತೃತ್ವದಲ್ಲಿ ಭಾರತ ಮಂಟಪದಲ್ಲಿಸ ನಡೆಯಿತು. ➤ 4 ಆದ್ಯತಾ ಕ್ಷೇತ್ರಗಳು (4 Priority Areas): ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಪರಿಸರ ಕಾರ್ಯಪಡೆಯು ಸುಸ್ಥಿರ ಭವಿಷ್ಯಕ್ಕಾಗಿ 4 ಮುಖ್ಯ ಆದ್ಯತಾ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ: ಸುಸ್ಥಿರ ಜೀವನಶೈಲಿ ಪ್ರಚಾರ (Promoting Sustainable Lifestyles): ಜಾಗರೂಕ ಬಳಕೆ (Mindful Consumption) ಮತ್ತು ಸಮುದಾಯ ಆಧಾರಿತ ಅಭ್ಯಾಸಗಳ ಮೂಲಕ ಪರಿಸರ ರಕ್ಷಣೆ. (ಭಾರತದ 'ಮಿಷನ್ LiFE' ತತ್ವಕ್ಕೆ ಪೂರಕ). ಕಾಡು ಬೆಳೆಸುವುದು, ಅರಣ್ಯ ಕಿಚ್ಚು ನಿರ್ವಹಣೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ (Afforestation, Forest Fire Management and Disaster Resilience): ಭೂಮಿ ಮರುಸ್ಥಾಪನೆ, ದತ್ತಾಂಶ ಸಂಗ್ರಹಣೆ ಹಾಗೂ ಅರಣ್ಯ ಪ್ರದೇಶಗಳ ಹಸಿರೀಕರಣದ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವುದು. ವೃತ್ತಾಕಾರದ ಅರ್ಥವ್ಯವಸ್ಥೆ (Circular Economy): ತ್ಯಾಜ್ಯ ನಿರ್ವಹಣೆ, ವಿಸ್ತೃತ ಉತ್ಪಾದಕರ ಹೊಣೆಗಾರಿಕೆ (Extended Producer Responsibility - EPR) ನೀತಿಗಳನ್ನು ಬಲಪಡಿಸುವುದು ಮತ್ತು ಸಂಪನ್ಮೂಲಗಳ ಮರುಬಳಕೆಗೆ ಆದ್ಯತೆ ನೀಡುವುದು. ಹವಾಮಾನ ಅಳವಡಿಕೆಯಲ್ಲಿ ಸಹಕಾರ (Climate Adaptation through Traditional Knowledge): ಪಾರಂಪರಿಕ ಜ್ಞಾನ ಮತ್ತು ಸಮುದಾಯ ಆಧಾರಿತ ಮಾದರಿಗಳನ್ನು ಬಳಸಿಕೊಂಡು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವುದು.