Job Description: * ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೈಸೂರು ಮೃಗಾಲಯದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಮೈಸೂರು ಮೃಗಾಲಯವು ಇದರ ಜೊತೆಗೆ ಪ್ರಾಣಿ ರಕ್ಷಣಾ ಅಭಿಯಾನದ ನೇತೃತ್ವವನ್ನು ನಟ ದರ್ಶನ್ ಅವರಿಗೆ ವಹಿಸಿದೆ. * ಪ್ರಸ್ತುತ ಮೃಗಾಲಯದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಅವರು ನಟ ದರ್ಶನ್‍ಗೆ ಅವರಿಗೆ ರಾಯಭಾರಿಯ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. * ಮೈಸೂರು ಮೃಗಾಲಯವನ್ನು ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಎಂದು ಕರೆಯಲಾಗುತ್ತದೆ. ಭಾರತದ ಮೈಸೂರಿನ ಅರಮನೆಯ ಸಮೀಪದಲ್ಲಿರುವ ಈ ಮೃಗಾಲಯವು 157-ಎಕರೆ ಪ್ರದೇಶದಲ್ಲಿದೆ. ಪ್ರಸ್ತುತ ಇದು ಭಾರತದಲ್ಲಿನ ಅತ್ಯಂತ ಹಳೆಯ ಹಾಗೂ ಅತ್ಯಂತ ಜನಪ್ರಿಯ ಪ್ರಾಣಿಸಂಗ್ರಹಾಲಯವಾಗಿದೆ. ಈ ಮೃಗಾಲಯದಲ್ಲಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳ ನೆಲೆಯಾಗಿದೆ. * ಮೈಸೂರು ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅವರ ಖಾಸಗಿ ಪ್ರಾಣಿ ಸಂಗ್ರಹಾಲಯದಿಂದ ಬೇಸಿಗೆ ಅರಮನೆಯ 10 ಎಕರೆ ಪ್ರದೇಶದಲ್ಲಿ ಈ ಹಿಂದೆ 1892 ರಲ್ಲಿ ಮೈಸೂರು ಮೃಗಾಲಯವನ್ನು ರಚಿಸಲಾಯಿತು. ಹಾಗೆಯೇ ಈ ಮೃಗಾಲಯವು 45 ಎಕರೆ ಪ್ರದೇಶದಲ್ಲಿ ವಿಸ್ತರಿಸಲಾಯಿತು. * ಈ ಮೃಗಾಲಯಕ್ಕೆ 1909 ರಲ್ಲಿ 'ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್' ಎಂದು ಮರುನಾಮಕರಣ ಮಾಡಿದ್ದಾರೆ. ಈ ಮೃಗಾಲಯದ ಮೊದಲ ಸೂಪರಿಂಟೆಂಡೆಂಟ್ 'ಸೌತ್ ವೇಲ್ಸ್‌ನ ಶ್ರೀ ಎ.ಸಿ. ಹ್ಯೂಸ್' ಅವರಾಗಿದ್ದರು. ಮತ್ತೇ ಇದನ್ನು 1948 ರಲ್ಲಿ ಮೈಸೂರು ರಾಜ್ಯ ಸರ್ಕಾರದ ಉದ್ಯಾನವನಗಳು ಹಾಗೂ ಉದ್ಯಾನವನಗಳ ಇಲಾಖೆಗೆ ವರ್ಗಾವಣೆ ಮಾಡಲಾಯಿತು. ನಂತರ ಈ ಮೃಗಾಲಯವನ್ನು 50 ಎಕರೆ ಹಾಗೂ 150 ಎಕರೆ ಕಾರಂಜಿ ಟ್ಯಾಂಕ್ ವಶಪಡಿಸಿಕೊಳ್ಳುವದರಿಂದ ವಿಸ್ತರಣೆ ಮಾಡಲಾಯಿತು. * ಮತ್ತೇ 1972 ರಲ್ಲಿ ಈ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು, ಹಾಗೂ 1979 ರಲ್ಲಿ ಕರ್ನಾಟಕದ ಮೃಗಾಲಯ ಪ್ರಾಧಿಕಾರಕ್ಕೆ ವಹಿಸಲಾಯಿತು. ಈ ಮೃಗಾಲಯವು 1992 ರಲ್ಲಿ 100 ವರ್ಷಗಳನ್ನು ಪೂರೈಸಿದೆ.