Job Description: * ಪ್ರಸ್ತುತ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮಯಪಾಲನೆ ಕಾರ್ಯಕ್ಷಮತೆ ವಿಷಯದ ಅಡಿಯಲ್ಲಿ ಈ ವರ್ಷದಲ್ಲಿ 8 ನೇ ಶ್ರೇಣಿಯನ್ನು ಪಡೆದಿದೆ. ಹಾಗೂ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಏಕೈಕ ವಿಮಾನ ನಿಲ್ದಾಣ ಇದಾಗಿದೆ, ಪ್ರಸ್ತುತ ಅಮೇರಿಕ ಮಿಯಾಮಿ ವಿಮಾನ ನಿಲ್ದಾಣ, ಜಪಾನ್ ನ ಫುಕುವೋಕಾ ಮತ್ತು ಟೋಕಿಯೋದ ಹನೆಡಾ ವಿಮಾನ ನಿಲ್ದಾಣಗಳು ಈ ಶ್ರೇಣಿಯ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. * ಈ ಶ್ರೇಣಿಯನ್ನು ಸಿರಿಯಮ್ ಘೋಷಿಸಿದೆ, ಈ ಸಿರಿಯಮ್ ಪ್ರಯಾಣ, ಹಣಕಾಸು, ಏರೋಸ್ಪೇಸ್ ಮತ್ತು ಏವಿಯೇಷನ್ ಉದ್ಯಮಗಳಿಗೆ ಏವಿಯೇಷನ್ ಡೇಟಾವನ್ನು ಒದಗಿಸುತ್ತದೆ. ಪ್ರಸ್ತುತ ಜಾಗತಿಕವಾಗಿ 70 ಮಾರ್ಗಗಳಿಗೆ ಸಮಯಕ್ಕೆ ಸರಿಯಾಗಿ ಹೊರಡುವುದನ್ನು ವಿಶ್ಲೇಷಿಸಿರುವ ಸಿರಿಯಮ್, ಚೆನ್ನೈ ವಿಮಾನ ನಿಲ್ದಾಣಕ್ಕೆ ಶೇ.89.32 ಶ್ರೇಯಾಂಕ ನೀಡಿದೆ. ಈ ಗೌರವವು ಕಾರ್ಯನಿರ್ವಹಣೆ ಮಾಡುತ್ತಿರುವ ಏರ್ಲೈನ್ಸ್'ಗೆ ಸಲ್ಲಬೇಕೆಂದು ಚೆನ್ನೈ ನ ವಿಮಾನ ನಿಲ್ದಾಣದ ನಿರ್ದೇಶಕ ಡಾ. ಶರದ್ ಕುಮಾರ್ ತಿಳಿಸಿದ್ದಾರೆ. * ತಮಿಳುನಾಡಿನ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇದು ಚೆನ್ನೈ ನಗರ ಹಾಗೂ ಅದರ ಮೆಟ್ರೋಪಾಲಿಟನ್ ಪ್ರದೇಶಕ್ಕೆ ಸೇವೆ ಸಲ್ಲಿಸುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ, ಈ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ 6ನೇ ಜನಸಂದಣಿಯ ವಿಮಾನ ನಿಲ್ದಾಣವಾಗಿದೆ, ಅಷ್ಟೇ ಅಲ್ಲದೇ ಇದು ಏಷ್ಯಾದ 49ನೇ ಜನಸಂದಣಿಯ ವಿಮಾನ ನಿಲ್ದಣವಾಗಿದೆ, ಇದು 2021 ರ ಆರ್ಥಿಕ ವರ್ಷದಲ್ಲಿ ಸುಮಾರು 5.49 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ. * ಈ ವಿಮಾನ ನಿಲ್ದಾಣವು ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಎರಡು ಹೊಸ ಟರ್ಮಿನಲ್‌ಗಳುನ್ನು ಆರಂಭಿಸುತ್ತಿದೆ, ಅವುಗಳು : T2 ಮತ್ತು ಒಂದು ಉಪಗ್ರಹ ಟರ್ಮಿನಲ್, ಇವುಗಳು ವರ್ಷಕ್ಕೆ 40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಲಿವೆ, ಸಧ್ಯ ಇವು ನಿರ್ಮಾಣ ಹಂತದಲ್ಲಿವೆ, ಈ ಉಪಗ್ರಹ ಟರ್ಮಿನಲ್ ಹೊಂದಿರುವ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. * ಪ್ರಸ್ತುತ ಚೆನ್ನೈ ನಲ್ಲಿನ ದೇಶೀಯ ಹಾಗೂ ಅಂತರಾಷ್ಟ್ರೀಯ ಟರ್ಮಿನಲ್‌ಗಳಿಗೆ ಕ್ರಮವಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಕೆ. ಕಾಮರಾಜ್ ಮತ್ತು ಸಿ.ಎನ್. ಅಣ್ಣಾದೊರೈ ಅವರ ಹೆಸರನ್ನು ಇಡಲಾಗಿದೆ. ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಹಾಗೂ ದೇಶೀಯ ಟರ್ಮಿನಲ್‌ಗಳನ್ನು ಪರಸ್ಪರ ಹೊಂದಿಕೊಂಡ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ.