Job Description: * ಪ್ರಸ್ತುತ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಒಂದು ಶಾಖಾ ಕಚೇರಿ ಸ್ಥಾಪನೆಯಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. * ಇದೀಗ ಕೇಂದ್ರ ಹಣಕಾಸು ಸಚಿವಾಲಯವು ಕರ್ನಾಟಕದ ಬೆಂಗಳೂರು ನಗರ ಅಷ್ಟೇ ಅಲ್ಲದೇ ಇತರೆ ಅಹ್ಮದಾಬಾದ್‌, ಪಾಟ್ನಾ, ಜೈಪುರ, ಭೋಪಾಲ, ಭುವನೇಶ್ವರ ನಗರಗಳಲ್ಲಿ ಈ NIA ಶಾಖಾ ಕಚೇರಿಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಿದೆ. * ಪ್ರಸ್ತುತ ಬೆಂಗಳೂರು, ಪಾಟ್ನಾ ಹಾಗೂ ಭೋಪಾಲದಲ್ಲಿರುವ ಕಚೇರಿಗಳು ಡೆಪ್ಯುಟಿ ಇನ್ಸೆಕ್ಟರ್‌ ಜನರಲ್‌ ಹುದ್ದೆಯ ಅಧಿಕಾರಿಯ ಸಮ್ಮುಖದಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಇನ್ನುಳಿದ ಕಚೇರಿಗಳು ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. ಸದ್ಯ ಕೇಂದ್ರ ಗೃಹ ಸಚಿವಾಲಯ ವಿತ್ತ ಸಚಿವಾಲಯಕ್ಕೆ ಮನವಿಯನ್ನು ಮಾಡಿಕೊಂಡಿತ್ತು, ಇದೀಗ ವಿತ್ತ ಸಚಿವಾಲಯವು ಈ ಮನವಿಗೆ ಸಮ್ಮತಿಯನ್ನು ನೀಡಿದೆ. * ರಾಷ್ಟ್ರೀಯ ತನಿಖಾ ಸಂಸ್ಥೆ (NIA): ಇದೊಂದು ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ ಈ ಸಂಸ್ಥೆಯನ್ನು ಅಂಗೀಕರಿಸಲಾಗಿದೆ, ಇದನ್ನು 2008 ರ ಡಿಸೆಂಬರ್. 31 ರಂದು ಭಾರತದ ಸಂಸತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ನ್ನು ಜಾರಿಗೊಳಿಸುವು ಮೂಲಕ ಈ ಏಜೆನ್ಸಿಯುನ್ನು ಅಸ್ತಿತ್ವಕ್ಕೆ ತರಲಾಗಿದೆ. ಭಾರತ ಸರ್ಕಾರವು ಭಾರತದಲ್ಲಿ ಭಯೋತ್ಪಾದನೆಗಳಿಗೆ ಸಂಬಂಧಿತ ಚಟುವಟಿಕೆಗಳನ್ನು ಎದುರಿಸಲು ಈ NIA ಸಂಸ್ಥೆಯನ್ನು ಸ್ಥಾಪಿಸಿದೆ. NIA ನವದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ, ಪ್ರಸ್ತುತ NIA ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಕ್ನೋ, ಮುಂಬೈ, ಕೋಲ್ಕತ್ತಾ, ರಾಯಪುರ ಹಾಗೂ ಜಮ್ಮುಗಳಲ್ಲಿ NIA ಶಾಖೆಗಳನ್ನು ಹೊಂದಿದೆ. * NIA ನ ಮೊದಲ ಸಂಸ್ಥಾಪಕ ಮಹಾನಿರ್ದೇಶಕರಾಗಿರುವ ರಾಧಾ ವಿನೋದ್ ರಾಜು ಅವರು 2010 ಜನೆವರಿ. 31 ರವರೆಗೆ ಸೇವೆ ಸಲ್ಲಿಸಿದ್ದಾರೆ. 2021 ರ ಜೂನ್ ನಲ್ಲಿ ಕುಲದೀಪ್ ಸಿಂಗ್ ಅವರು NIA ನ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ.