Job Description: * ಇತ್ತೀಚಿಗೆ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯ್ ಸಪ್ಕಲ್ ಅವರು ನಿಧನರಾಗಿದ್ದಾರೆ, ಇವರು ಸಾಮಾಜಿಕ ಕಾರ್ಯಕರ್ತೆ, ಅದೆಷ್ಟೋ ಅನಾಥಮಕ್ಕಳ ಪಾಲಿಗೆ ತಾಯಿಯಾಗಿದ್ದರು, ಸರಿ ಸುಮಾರು 2,000 ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಿ ಬೆಳೆಸಿದ್ದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನು ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. * ಅನಾಥಮಕ್ಕಳ ತಾಯಿ ಸಿಂಧುತಾಯ್ ಸಪ್ಕಲ್ ಅವರು ಹಿಂದುಳಿದ ಸಮುದಾಯಗಳ ಉನ್ನತಿಗೆ ಶ್ರಮಿಸಿದ್ದಾರೆ. ಇವರು ಮಹಾರಾಷ್ಟ್ರದ ವಾರ್ಧದ ಬಡಕುಟುಂಬದಲ್ಲಿ ಜನಿಸಿದ್ದಾರೆ, ಇವರಿಗೆ ತಮ್ಮ 12 ನೇ ವಯಸ್ಸಿನಲ್ಲೇ ಅವರಿಗಿಂತಲೂ 20 ವರ್ಷ ಹಿರಿಯ ವ್ಯಕ್ತಿಯ ಜೊತೆಗೆ ಮದುವೆಯನ್ನು ಮಾಡಿದ್ದರು. ಸಿಂಧುತಾಯ್ ಅವರು, ಅರಣ್ಯ ಇಲಾಖೆ ಹಾಗೂ ಭೂಮಾಲಿಕರಿಂದ ಸ್ಥಳೀಯ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ವಂಚನೆಯ ವಿರುದ್ಧವಾಗಿ ಹೋರಾಟವನ್ನು ನಡೆಸಿದ್ದಾರೆ. * ಸಿಂಧುತಾಯಿ ಸಪ್ಕಾಲ್ ಅವರು 1948 ರ ನವೆಂಬರ್. 14 ರಂದು ಮಹಾರಾಷ್ಟ್ರದ ವಾರ್ಧಾ ಎಂಬಲ್ಲಿ ಜನಿಸಿದ್ದರು, ಇತ್ತೀಚಿಗೆ ಇವರು 2022 ರ ಜನವರಿ. 04 ರಂದು ನಿಧನ ಹೊಂದಿದ್ದಾರೆ. ಇವರೊಬ್ಬ ಭಾರತೀಯ ಸಮಾಜ ಸೇವಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು, ಇವರು ಭಾರತದಲ್ಲಿ ಅನಾಥ ಮಕ್ಕಳನ್ನು ಬೆಳೆಸುವಲ್ಲಿ ಇವರ ಕೆಲಸ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ, ಇವರಿಗೆ 2021 ರಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.