Job Description: * ಪ್ರಸ್ತುತ ನವದೆಹಲಿಯಲ್ಲಿರುವ ಯುಎಸ್ ರಾಯಭಾರಿ ಕಚೇರಿಯ ಮುಖ್ಯಸ್ಥರಾಗಿದ್ದ ಮಾಜಿ ಯುಎಸ್ ರಾಜತಾಂತ್ರಿಕ ಅತುಲ್ ಕೇಶಪ್ ಅವರನ್ನು ಇದೀಗ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (USIBC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾತೃ ಸಂಸ್ಥೆ ಯುಎಸ್ ಚೇಂಬರ್ ಆಫ್ ಕಾಮರ್ಸ್ ಮಾಹಿತಿಯನ್ನು ಪ್ರಕಟಿಸಿದೆ. * ಮೂಲತಃ ಅತುಲ್ ಕೇಶಪ್ ಅವರು ವೃತ್ತಿಜೀವನದ ರಾಜತಾಂತ್ರಿಕರಾಗಿದ್ದಾರೆ, ಇವರು US ವಿದೇಶಾಂಗ ಸೇವೆಯಲ್ಲಿ 28 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ, ಈ ಮೊದಲು ಇವರು ಶ್ರೀಲಂಕಾದ ರಾಯಭಾರಿ ಹಾಗೂ ಇನ್ನು ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ನಿಶಾ ಬಿಸ್ವಾಲ್ ಅವರು ಯುಎಸ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಅಂತರರಾಷ್ಟ್ರೀಯ ತಂತ್ರ ಹಾಗೂ ಜಾಗತಿಕ ಉಪಕ್ರಮಗಳು ಮತ್ತು ದಕ್ಷಿಣ ಏಷ್ಯಾದ ಹಿರಿಯ ಉಪಾಧ್ಯಕ್ಷರಾಗಿ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಇದೀಗ ಕೇಶಪ್ ಅವರು ದಕ್ಷಿಣ ಹಾಗೂ ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿದ್ದ ಸಂಧರ್ಭದಲ್ಲಿ ರಾಜ್ಯ ಇಲಾಖೆಯಲ್ಲಿ ಬಿಸ್ವಾಲ್ ಅವರ ನಿಯೋಗಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. * 'USIBC'ಯ ಮುಂದಿನ ಅಧ್ಯಕ್ಷರಾಗಿ ರಾಯಭಾರಿ ಕೇಶಪ್ ಅವರನ್ನು ನೇಮಕ ಮಾಡಿದ್ದಕ್ಕೆ ನಮಗೆ ಖುಷಿಯಾಗಿದೆ ಎಂದು ಯುಎಸ್ ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಅಂತರರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಮೈರಾನ್ ಬ್ರಿಲಿಯಂಟ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಹೂಡಿಕೆಗಳ ಹರಿವುಗಳನ್ನು ಹೆಚ್ಚಿಸಲು ಭಾರತ ಹಾಗೂ US ಖಾಸಗಿ ವಲಯಗಳನ್ನು ಪ್ರಬುದ್ಧಗೊಳಿಸಲು ಹಾಗೂ ಪ್ರೋತ್ಸಾಹಿಸಲು ಈ ಹಿಂದೆ 1975 ರಲ್ಲಿ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್'ನ್ನು ವ್ಯಾಪಾರ ವಕಾಲತ್ತು ಸಂಸ್ಥೆಯಾಗಿ ರಚಿಸಿವೆ. ಇದು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸಲು ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ. * ಈ USIBC ಸದ್ಯ 12 ಕಾರ್ಯಕಾರಿ ಸಮಿತಿಗಳನ್ನು ಹೊಂದಿದೆ, ಹಾಗೂ ಇವುಗಳು ಪ್ರಮುಖ ವ್ಯಾಪಾರ ವಲಯವನ್ನು ಒಳಗೊಂಡಿವೆ. * ಈ ಹಿಂದೆ 2017 ರ ನವೆಂಬರ್. 28 ರಂದು ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಮಹಿಳಾ ನವೋದ್ಯಮಿಗಳು, ಸಾಮಾಜಿಕ ನಾಯಕರು ಹಾಗೂ ಉದ್ಯಮಿಗಳಿಗೆ ಎಂಬ ಶೀರ್ಷಿಕೆಯ ಸಹಯೋಗದ ಉಪಕ್ರಮವನ್ನು ಘೋಷಣೆ ಮಾಡಿದೆ. ಈ ಉಪಕ್ರಮದ ಅಡಿಯಲ್ಲಿ ಮಹಿಳಾ ಉದ್ಯಮಿಗಳು ಹಾಗೂ ನವೋದ್ಯಮಿಗಳಿಗೆ ನಾಯಕತ್ವ, ಮಾರ್ಗದರ್ಶನ ಮತ್ತು ಅಭಿವೃದ್ಧಿ ಅವಕಾಶಗಳನ್ನು ನೀಡುವುದು ಈ WISE ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.