Job Description: * ಪ್ರಸ್ತುತ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2022 ರ ಜನವರಿ. 5 ರಂದು 'ತ್ಯಾಜ್ಯ ಟೈರ್‌ಗಳಿಗೆ ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR)'ಯ ಮೇಲಿರುವ ನಿಯಮಗಳ ಕರಡು ಅಧಿಸೂಚನೆಯನ್ನು ವಿವರಿಸಿದೆ. * ತ್ಯಾಜ್ಯ ಟೈರ್(Waste Tyres) ನಿರ್ವಹಣೆಯ ನಿಯಮಗಳು ನಿಯಂತ್ರಣವು ಅಂತಿಮಗೊಂಡರೆ, 2022-23 ರ ಆರ್ಥಿಕ ವರ್ಷದಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿದು ಬಂದಿದೆ, ಈ ಹಿನ್ನಲೆಯಿಂದಾಗಿ ಕರಡು ಅಧಿಸೂಚನೆಯನ್ನು ಹಂಚಿಕೊಳ್ಳಲಾಗಿದೆ. ಪ್ರಸ್ತುತ ಭಾರತದಲ್ಲಿ ಪ್ರತಿ ವರ್ಷವು ಸರಿ ಸುಮಾರು 275,000 ಟೈರ್‌ಗಳನ್ನು ತ್ಯಜಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ವರದಿಯನ್ನು ನೀಡಿದೆ. ಅಷ್ಟೇ ಅಲ್ಲದೇ ಮರುಬಳಕೆ ಮಾಡಿಕೊಳ್ಳುವ ಸಲುವಾಗಿ ಸುಮಾರು 3 ಮಿಲಿಯನ್ ತ್ಯಾಜ್ಯ ಟೈರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. * ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಹಿಂದೆ 2019 ರ ಸೆಪ್ಟೆಂಬರ್. 19 ರಂದು ತ್ಯಾಜ್ಯ ಟೈರ್‌ಗಳು ಮತ್ತು ಅವುಗಳ ಮರುಬಳಕೆಗಾಗಿ ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ರೂಪಿಸಲು NGT ನಿರ್ದೇಶನವನ್ನು ನೀಡಿತ್ತು. ಇದರ ಅಡಿಯಲ್ಲಿ ಎಂಡ್-ಆಫ್-ಲೈಫ್ ಟೈರ್‌ಗಳು/ವೇಸ್ಟ್ ಟೈರ್‌ಗಳ ಸರಿಯಾದ ನಿರ್ವಹಣೆಯ ಅನುಪಸ್ಥಿತಿಗೆ ಸಂಬಂಧಪಟ್ಟಿರುವ ಪ್ರಕರಣದಲ್ಲಿ NGT ಯು ಇದಕ್ಕೆ ನಿರ್ದೇಶನ ನೀಡಿದೆ. * ತ್ಯಾಜ್ಯ ಟೈರ್‌ಗಳನ್ನು ಮರುಬಳಕೆ ಮಾಡಿದ ರಬ್ಬರ್, ಕ್ರಂಬ್ ರಬ್ಬರ್ ಮಾರ್ಪಡಿಸಿದ ಬಿಟುಮೆನ್, ಕ್ರಂಬ್ ರಬ್ಬರ್, ಪೈರೋಲಿಸಿಸ್ ಆಯಿಲ್/ಚಾರ್ ಹಾಗೂ ಚೇತರಿಸಿಕೊಂಡ ಕಾರ್ಬನ್ ಕಪ್ಪು ಎಂದು ಮರುಬಳಕೆ ಮಾಡಿಕೊಳ್ಳಲಾಗುತ್ತದೆ. * ಕರಡು ಅಧಿಸೂಚನೆಯು ಅಡಿಯಲ್ಲಿನ ನಿಯಮಗಳು: - 2020-2021 ರಲ್ಲಿ ಸಿದ್ದಪಡಿಸಿದ ಅಥವಾ ಆಮದು ಮಾಡಿಕೊಳ್ಳುವ ಟೈರ್‌ಗಳ ಗುಣಮಟ್ಟದ ಶೇಕಡಾ 35 ರಷ್ಟು EPR ಬಾಧ್ಯತೆ ಹೊಂದಿವೆ. - 2021-22 ರಲ್ಲಿ ಸಿದ್ಧಪಡಿಸಲಾಗಿರುವ ಅಥವಾ ಆಮದು ಮಾಡಿಕೊಳ್ಳಲಾದ ಹೊಸ ಟೈರ್‌ಗಳ ಪ್ರಮಾಣದಲ್ಲಿ ಶೇಕಡಾ 70 ರಷ್ಟು EPR ಬಾಧ್ಯತೆ ಹೊಂದಿವೆ. - 2022-23 ರಲ್ಲಿ ಸಿದ್ದಪಡಿಸಿರು ಅಥವಾ ಆಮದು ಮಾಡಿಕೊಳ್ಳಲಾದ ಹೊಸ ಟೈರ್‌ಗಳ ಪ್ರಮಾಣದ ಶೇಕಡಾ 100 ರಷ್ಟು EPR ಬಾಧ್ಯತೆಯನ್ನು ಹೊಂದಿವೆ. - 2024-25 ರ ನಂತರ, EPR ಬಾಧ್ಯತೆಯು ಹಿಂದಿನ ವರ್ಷದಲ್ಲಿ ಸಿದ್ಧಪಡಿಸಲಾಗಿರುವ ಅಥವಾ ಆಮದು ಮಾಡಿಕೊಂಡ ಹೊಸ ಟೈರ್‌ಗಳ ಪ್ರಮಾಣದ 100 ಪ್ರತಿಶತದಷ್ಟಿರುತ್ತದೆ. - 2022 ರ ಏಪ್ರಿಲ್ 01 ರ ನಂತರ ಸ್ಥಾಪಿಸಲಾದ ಘಟಕಗಳಿಗೆ, ಎರಡು ವರ್ಷಗಳ ನಂತರ EPR ಬಾಧ್ಯತೆ ಆರಂಭವಾಗುತ್ತವೆ. ಹಿಂದಿನ ವರ್ಷದಲ್ಲಿ ತಯಾರಿಸಿದ ಅಥವಾ ಆಮದು ಮಾಡಿಕೊಂಡ ಹೊಸ ಟೈರ್‌ಗಳ 100 ಪ್ರತಿಶತದಷ್ಟಿರುತ್ತದೆ. * ತ್ಯಾಜ್ಯ ಟೈರ್‌ಗಳ ಉತ್ಪಾದಕರು ಹಾಗೂ ಮರುಬಳಕೆ ಮಾಡುವವರು (extended producer responsibility) EPR ಬಾಧ್ಯತೆಗಳ ಅಡಿಯಲ್ಲಿ ಒಳಗಾಗುತ್ತಾರೆ, ಹಾಗೂ ಅವರ ನೋಂದಣಿ ಕಡ್ಡಾಯವಾಗಿರುತ್ತದೆ, ಮತ್ತುನೋಂದಣಿ ಇಲ್ಲದೆ ಯಾವುದೇ ವ್ಯವಹಾರವನ್ನು ನಡೆಸಲು ಅನುಮತಿವಿರುವದಿಲ್ಲ ಎಂದು ತಿಳಿಸಿದ್ದಾರೆ.