Job Description: * ಭಾರತೀಯ ಟಾಯ್ ಸ್ಟೋರಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯ ಭಾಗವಾಗಿ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ಕ್ಲಸ್ಟರ್ ಇದು ಮೊದಲ ಆಟಿಕೆ ತಯಾರಿಕಾ ಕ್ಲಸ್ಟರ್ ಆಗಿದೆ, ಹಾಗೂ ಇದು 2022 ರ ಮಾರ್ಚ್ ತಿಂಗಳಿಂದ ಕಾರ್ಯನಿರ್ವಹಿಸಲಿದೆ. * ಕೊಪ್ಪಳ ಆಟಿಕೆ ಕ್ಲಸ್ಟರ್ನ ಮಾಹಿತಿ : ಈ ಆಟಿಕೆ ಕ್ಲಸ್ಟರ್ ನ್ನು 400 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಇದು ಆಟಿಕೆ ತಯಾರಿಕೆ, ಉಪಕರಣ ತಯಾರಿಕೆ, ಪ್ಯಾಕೇಜಿಂಗ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ, ಪೇಂಟ್ ತಯಾರಿಕೆ ಹಾಗೂ ಇನ್ನಿತರ ಬಿಡಿಭಾಗಗಳನ್ನು ಒಳಗೊಂಡಿದೆ. ಈ ಆಟಿಕೆ ಕ್ಲಸ್ಟರ್ ಪೂರ್ಣಗೊಂಡ ನಂತರ ಆರ್ಥಿಕ ವಲಯದಲ್ಲಿ 100 ಸಣ್ಣ ಹಾಗೂ ದೊಡ್ಡ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. * ಈ ಕೊಪ್ಪಳ ಕ್ಲಸ್ಟರ್ 4,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಲಿದೆ. ಹಾಗೂ 25,000 ನೇರ ಉದ್ಯೋಗಗಳು ಜೊತೆಗೆ ಒಂದು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಹಾಗೂ ಇದರಲ್ಲಿ ಮಹಿಳೆಯರು ಭಾಗವಹಿಸುವ ಸಾಧ್ಯತೆಗಳಿವೆ ಎಂದಿದ್ದಾರೆ. * ಪ್ರಸ್ತುತ ಕ್ಲಸ್ಟರ್ ವಿವಿಧ ರೀತಿಯ ಆಟಿಕೆಗಳನ್ನು ತಯಾರಿಸುತ್ತದೆ, ಉದಾಹರಣೆ : ಎಲೆಕ್ಟ್ರಾನಿಕ್ ಆಟಿಕೆಗಳು, ಬೆಲೆಬಾಳುವ ಆಟಿಕೆಗಳು, ಶಾಲಾಪೂರ್ವ ಆಟಿಕೆಗಳು, ಹೊರಾಂಗಣ ಆಟಿಕೆಗಳು, ಶಿಶು ಆಟಿಕೆಗಳು, ಗೊಂಬೆಗಳು, ಶೈಕ್ಷಣಿಕ ಆಟಿಕೆಗಳು ಸೇರಿವೆ. ರಿಮೋಟ್-ನಿಯಂತ್ರಿತ ಕಾರುಗಳು, ಎಲೆಕ್ಟ್ರಾನಿಕ್ ವಾಹನಗಳು, ಹಾಗೂ ಇನ್ನಿತರ ಆಟಿಕೆಗಳು ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. * ಸದ್ಯ ಭಾರತದಲ್ಲಿ ಆಟಿಕೆ ಉದ್ಯಮವು ಅಷ್ಟೊಂದು ಉತ್ತಮವಾಗಿಲ್ಲ, ಇದೀಗ ಭಾರತದಲ್ಲಿ 4,000 ಕ್ಕೂ ಅಧಿಕ ಆಟಿಕೆ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಘಟಕಗಳಲ್ಲಿ ಕೇವಲ 10% ಮಾತ್ರ ಸಂಘಟಿತ ವಲಯಕ್ಕೆ ಸೇರಿವೆ, ಈ ಹಿನ್ನಲೆಯಿಂದಾಗಿ ಆಟಿಕೆ ಸಮೂಹಗಳನ್ನು ರಚಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ. * ಕೊಪ್ಪಳದ ಆಟಿಕೆ ಕ್ಲಸ್ಟರ್ Aequs Infra ನ ಉಪಕ್ರಮವಾಗಿದೆ. ಇದು ಪ್ರಮುಖ್ಯವಾಗಿ '3' ಸ್ಥಳಗಳಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರೀಕೃತವಾಗಿದೆ. * ಅವುಗಳು: - ಕೊಪ್ಪಳ (ಲೈಟ್ ಇಂಜಿನಿಯರಿಂಗ್ ಗೂಡ್ಸ್ ಮತ್ತು ಟಾಯ್ ಮ್ಯಾನುಫ್ಯಾಕ್ಚರಿಂಗ್). - ಬೆಳಗಾವಿ (ಏರೋಸ್ಪೇಸ್ ಸೆಕ್ಟರ್ ಮತ್ತು ನಿಖರ ಎಂಜಿನಿಯರಿಂಗ್). - ಹುಬ್ಬಳ್ಳಿ (ಗ್ರಾಹಕ ಸರಕುಗಳು ಮತ್ತು ಉಪಕರಣಗಳು). * ಭಾರತ ಸರ್ಕಾರವು 2021 ರ ಫೆಬ್ರವರಿಯಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ '8' ಆಟಿಕೆ ಉತ್ಪಾದನಾ ಕ್ಲಸ್ಟರ್‌ಗಳನ್ನು ಅನುಮೋದಿಸಿದೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಲಾ ಒಂದರಂತೆ ಹಾಗೂ ರಾಜಸ್ಥಾನ ರಾಜ್ಯದಲ್ಲಿ ಎರಡು ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿತ್ತು. * ಈ ಹಿಂದೆ 2020 ರಲ್ಲಿ ಭಾರತದ ಆಟಿಕೆ ಆಮದು 1.5 ಶತಕೋಟಿ USD ಗಳಾಗಿತ್ತು, ಇವುಗಳಲ್ಲಿ 90% ಚೀನಾ ಮತ್ತು ತೈವಾನ್‌ನಿಂದ ಆಮದು ಮಾಡಿಕೊಳ್ಳಲಾಗಿತ್ತು, ಇದೀಗ ಭಾರತ ಸರ್ಕಾರವು ಆಮದು ಅವಲಂಬನೆಯನ್ನು ಕಡಿಮೆ ಉದ್ದೇಶದಿಂದ ದೇಶದಲ್ಲಿ 35 ಆಟಿಕೆ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದೆ.