Job Description: * ಪ್ರಸ್ತುತ 2001 ರ ಡಿಸೆಂಬರ್.13 ರಂದು ಸಂಸತ್ ದಾಳಿಯ ಹುತಾತ್ಮರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಾಗೂ ಪ್ರಧಾನಿ ನರೇಂದ್ರ ಮೋದಿ, & ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಗೌರವ ನಮನ ಸಲ್ಲಿಸಿದ್ದಾರೆ. * ಇದೀಗ ಸಂಸತ್ ಭವನದ ಮೇಲೆ ದಾಳಿ ನಡೆದು ಇಂದಿಗೆ 20 ವರ್ಷಗಳು ಕಳೆದಿವೆ, 2001 ಸಂಸತ್ ಉಗ್ರರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ '9' ಜನರು ಮೃತಪಟ್ಟಿದ್ದರು. * 2001 ರ ಡಿಸೆಂಬರ್. 13 ರಂದು, ಭಾರತದ ಸಂಸತ್ತಿನ ಮೇಲೆ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕರು ದಾಳಿ ಮಾಡಿದರು. * 2001 ರ ಡಿಸೆಂಬರ್. 13 ರಂದು ಬೆಳಗಿನಜಾವಾ '5' ಭಯೋತ್ಪಾದಕರು ಸಂಸತ್ ಭವನದ ಸಂಕೀರ್ಣವನ್ನು ನಕಲಿ ಗೃಹ ಸಚಿವಾಲಯದ ಸ್ಟಿಕರ್ ಅಳವಡಿಸಿದ, ಅಂಬಾಸಿಡರ್ ಕಾರಿನಲ್ಲಿ ಪ್ರವೇಶಿಸಿದರು, ಆ ಸಂಧರ್ಭದಲ್ಲಿ ಅವರ ಕಾರನ್ನು ಹಿಂದಕ್ಕೆ ತಿರುಗಿಸಲು ಒತ್ತಾಯಿಸಲಾಯಿತು, ಆಗ ಉಗ್ರರ ಕಾರು ಆಗ ಆಡಳಿತದಲ್ಲಿರುವ ಉಪ ರಾಷ್ಟ್ರಪತಿ ಕ್ರಿಶನ್ ಕಾಂತ್ ಅವರ ವಾಹನಕ್ಕೆ ಡಿಕ್ಕಿಹೊಡೆಯಿತು, ಭಯೋತ್ಪಾದಕರು ಅದೇ ಸಂಧರ್ಭವನ್ನು ಬಳಸಿಕೊಂಡು ಗುಂಡು ಹಾರಿಸಲು ಆರಂಭಿಸಿದರು. ಅಷ್ಟರಲ್ಲಿ ಸಂಸತ್ತಿನ ಸಿಬ್ಬಂದಿಗಳು ಸಂಸತ್ತಿನ ಕಟ್ಟಡದ ಎಲ್ಲಾ ಗೇಟ್ಗಳನ್ನು ಮುಚ್ಚಿದರು, ಇಷ್ಟಾದರೂ ಉಗ್ರರ ಗುಂಡಿನ ಚಕಮಕಿಯಲ್ಲಿ '8' ಭದ್ರತಾ ಸಿಬ್ಬಂದಿ, '1' ತೋಟದ ಮಾಲಿ ಮೃತಪಟ್ಟರು. * ಈ ಉಗ್ರರ ದಾಳಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ '4' ಹೆಸರುಗಳನ್ನು ಬಹಿರಂಗಪಡಿಸಲಾಯಿತು ಅವುಗಳು: ಅಫ್ಜಲ್ ಗುರು, ಎಸ್ಎಆರ್ ಗೀಲಾನಿ,ನವಜೋತ್ ಸಂಧು, ಹಾಗೂ ಶೌಕತ್ ಹುಸೇನ್. * ನಾಲ್ಕು ಜನ ಉಗ್ರರಲ್ಲಿ ನವಜೋತ್ ಸಂಧು ಕೇವಲ 1 ಆರೋಪಕ್ಕೆ ಅಪರಾಧಿ ಎಂದು ಸಾಬೀತಾಯಿತು, ಈ ಕಾರಣದಿಂದಾಗಿ ಆಕೆಗೆ '5' ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಯಿತು, ಇನ್ನಉಳಿದ 'ಮೂರೂ' ಉಗರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತು. ಇದಾದ ಬಳಿಕ ಎಸ್ಎಆರ್ ಗೀಲಾನಿಯನ್ನು ಖುಲಾಸೆಗೊಳಿಸಲಾಯಿತು, ಹಾಗೂ ಹುಸೇನ್ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಿತು. ಆದರೆ ನ್ಯಾಯಾಲವು ಅವನ ಉತ್ತಮ ನಡತೆಯನ್ನು ಅರಿತು ಬಿಡುಗಡೆಯ ದಿನಾಂಕಕ್ಕಿಂತ 9 ತಿಂಗಳ ಮೊದಲು ಹುಸೇನ್ ನ್ನು ಬಿಡುಗಡೆ ಮಾಡಲಾಯಿತು. * ಅಫ್ಜಲ್ ಗುರು ಪತ್ನಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ನಂತರ ಅಂದರೆ 2013 ರ ಫೆಬ್ರವರಿ 9 ರಂದು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದರು.