Job Description: * ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇರಿಸಿ ಹಣ ಕಳೆದು ಕೊಂಡಿರುವ ಠೇವಣಿದಾರರಿಗೆ ಹಣ ವಾಪಸ್ ಕೊಡಿಸುವ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. * ಈ ಠೇವಣಿದಾರರಿಗೆ ಹಣ ವಾಪಸ್ ಕೊಡಿಸುವ ಯೋಜನೆಯಿಂದಾಗಿ ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನ ಸರಿ ಸುಮಾರು 33 ಸಾವಿರ ಠೇವಣಿದಾರರು, ಹಾಗೂ ರಾಜ್ಯದ 77,819 ಠೇವಣಿದಾರರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ತಿಳಿಸಲಾಗಿದೆ. * ಈ ಯೋಜನೆ ಅಡಿಯಲ್ಲಿ ಒಟ್ಟಾರೆ 77,819 ಠೇವಣಿದಾರರಿಗೆ ಮುಂಬರುವ ದಿನಗಳಲ್ಲಿ ಹಣ ಮರುಪಾವತಿ ಮಾಡುವ ಭರವಸೆಯನ್ನು ನೀಡಿದ್ದಾರೆ. ಈ ಠೇವಣಿದಾರರು ಠೇವಣಿ ಇಟ್ಟಿರುವ ಬ್ಯಾಂಕ್ ಗಳು, ಗುರು ರಾಘವೇಂದ್ರ ಬ್ಯಾಂಕ್, ಹಾಗೂ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ್ ಕೋ- ಆಪರೇಟೀವ್ ಬ್ಯಾಂಕ್, ವಿಜಯಪುರದ ಡೆಕ್ಕನ್ ಅರ್ಬನ್ ಕೋ- ಆಪರೇಟೀವ್ ಬ್ಯಾಂಕ್, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್ ಕೋ- ಆಪರೇಟೀವ್ ಬ್ಯಾಂಕಗಳಾಗಿವೆ. * ಪ್ರಧಾನಿ ಮೋದಿ ಅವರು ಈ ಯೋಜನೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಭೆಗೆ ವಿಡಿಯೋ ಕಾನ್ಫರನ್ಸ್ ನ ಮೂಲಕ ಚಾಲನೆ ನೀಡಿದ್ದಾರೆ. * ಸದ್ಯ ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕಿನ 33 ಸಾವಿರ ಠೇವಣಿದಾರರ ಖಾತೆಗೆ 753.61 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ, ಇದಷ್ಟೇ ಅಲ್ಲದೇ ದೇಶದ ಬೇರೆ ಬೇರೆ ಬ್ಯಾಂಕುಗಳಲ್ಲಿರುವ ಠೇವಣಿ ಇಟ್ಟಿರುವವರ ಪೈಕಿ 1 ರಿಂದ 5 ಲಕ್ಷ ರೂ. ವರೆಗಿನ ಠೇವಣಿಯಲ್ಲಿ ಶೇ.98.1 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಜನರಿದ್ದಾರೆ, ಈ ಕಾರಣದಿಂದಾಗಿ ಠೇವಣಿದಾರರಿಗೂ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.