Job Description: * ಇದೀಗ ದುಬೈ ಸರ್ಕಾರವು ಶೇ. 100 ಪ್ರತಿಶತ ಪೇಪರ್ಲೆಸ್(ಪಪೆರ್ಲ್ಸ್) ಅಥವಾ ಡಿಜಿಟಲೀಕರಣಗೊಂಡ ವಿಶ್ವದ ಮೊದಲ ಸರ್ಕಾರವಾಗಿದೆ, ಈ ಮಾಹಿತಿಯನ್ನು ಎಮಿರೇಟ್ನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಿಳಿಸಿದ್ದಾರೆ. * ಪ್ರಸ್ತುತ ದುಬೈ ಸರ್ಕಾರದ ಎಲ್ಲಾ ವ್ಯವಹಾರಗಳು ಇದೀಗ ಶೇ. 100 ಪ್ರತಿಶತ ಡಿಜಿಟಲ್ ಆಗಿವೆ, ಇದೀಗ ಇಲ್ಲಿನ ಎಲ್ಲ ಸರ್ಕಾರಿ ಸೇವೆಗಳ ಡಿಜಿಟಲ್ ವೇದಿಕೆಯಿಂದ ನಿರ್ವಹಿಸಲಾಗುತ್ತದೆ. * ಡಿಜಿಟಲೀಕರಣದಿಂದಾಗಿ 1.3 ಬಿಲಿಯನ್ ದಿರ್ಹಮ್ ಅಂದರೆ USD 350 ಮಿಲಿಯನ್, ಹಾಗೂ 14 ಮಿಲಿಯನ್ ಮಾನವ ಗಂಟೆಗಳ(ವರ್ಕಿಂಗ್ Hours) ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. * ಈ ಡಿಜಿಟಲೀಕರಣ ಸಾಧನೆಯು ದುಬೈನ ವಿಶ್ವ-ಪ್ರಮುಖ ಡಿಜಿಟಲ್ ರಾಜಧಾನಿಯ ಸ್ಥಾನಮಾನವನ್ನು ಹಾಗೂ ಸರ್ಕಾರಿ ಸೇವೆಗಳನ್ನು ಮತ್ತಷ್ಟು ಅಭಿವೃದಿಪಡಿಸುವಲ್ಲಿ ಅದರ ಸ್ಥಾನಮಾನವನ್ನು ರೋಲ್ ಮಾಡೆಲ್ ಆಗಿ ಬಲಪಡಿಸಲಿದೆ ಎಂದು ತಿಳಿಸಿದ್ದಾರೆ. * ದುಬೈ ನಂತರ, ಇದೀಗ US, UK, ಯುರೋಪ್, ಹಾಗೂ ಕೆನಡಾ ದೇಶಗಳ ಸರ್ಕಾರಗಳು ತನ್ನ ಸರ್ಕಾರದ ಕಾರ್ಯವಿಧಾನಗಳು, ಹಾಗೂ ನಾಗರಿಕರ ಗುರುತಿಸುವಿಕೆಗಳನ್ನು ಡಿಜಿಟಲೀಕರಗೊಳಿಸುವ ಆಶಯವನ್ನು ವ್ಯಕ್ತಪಡಿಸಿವೆ. * ಪ್ರಸ್ತುತ ದುಬೈ ಸರ್ಕಾರವು ಇದೀಗ ಪೇಪರ್ಲೆಸ್ ಯೋಜನೆಯನ್ನು '5' ಸತತ ಹಂತಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. * ದುಬೈ ಸರ್ಕಾರ : ದುಬೈ ಎಮಿರೇಟ್ ನ್ನು ಆಳುತ್ತದೆ, ಹಾಗೂ ಇದು ಯುನೈಟೆಡ್ ಅರಬ್ ಎಮಿರೇಟ್ಸ್ ನ್ನು ರೂಪಿಸುವ '7' ಘಟಕ ರಾಜಪ್ರಭುತ್ವಗಳಲ್ಲಿ ಒಂದಾಗಿದೆ. ಸರ್ಕಾರದ ಕಾರ್ಯನಿರ್ವಾಹಕ ಅಧಿಕಾರವು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಆಗಿದೆ. * ದುಬೈನ ಪ್ರಥಮ ಮಹಿಳೆ : ಎಂಬುದು ದುಬೈ ಆಡಳಿತಗಾರನಿಗೆ ಹಿರಿಯ ಹೆಂಡತಿ ಮತ್ತು ಸಂಗಾತಿಗೆ ನೀಡಿದ ಹೆಸರಾಗಿದೆ. ಪ್ರಸ್ತುತ ಪ್ರಥಮ ಮಹಿಳೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪತ್ನಿ ಶೇಖಾ ಹಿಂದ್. ಪ್ರಥಮ ಮಹಿಳೆ ಅನೇಕ ಅಧಿಕೃತ ಸಮಾರಂಭಗಳಲ್ಲಿ, ಹಾಗೂ ರಾಜ್ಯದ ಕಾರ್ಯಗಳಿಗೆ ಎಮಿರ್ ಜೊತೆಗೆ ಭಾಗಿಯಾಗುತ್ತಿದ್ದರು.