Job Description: * ಪ್ರತಿ ವರ್ಷವು ಡಿಸೆಂಬರ್. 07 ರಂದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಣೆ ಮಾಡುತ್ತಾರೆ, ಈ ದಿನವನ್ನು ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಆಚರಣೆ ಮಾಡುತ್ತವೆ. * 2021 ರ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು'ಜಾಗತಿಕ ವಾಯುಯಾನ ಅಭಿವೃದ್ಧಿಗಾಗಿ ಆವಿಷ್ಕಾರವನ್ನು ಮುಂದುವರಿಸುವುದು' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗಿದೆ. * ಪ್ರಸ್ತುತ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ ಧ್ಯೆಯೇ ವ್ಯಾಕ್ಯವನ್ನು '5' ವರ್ಷಕೊಮ್ಮೆ ಆಯ್ಕೆ ಮಾಡಲಾಗುತ್ತದೆ, ಈ ಹಿಂದೆ 2019 ರಲ್ಲಿ ಆಯ್ಕೆ ಮಾಡಲಾಗಿರುವ ವಿಷಯದ ಅಡಿಯಲ್ಲಿ ಈ ದಿನವನ್ನು ವಾರ್ಷಿಕವಾಗಿ ಅಂದರೆ 2023 ರವರೆಗೆ ಆಚರಿಸಲಾಗುತ್ತದೆ, ಹಾಗೂ ಮುಂದಿನ ಧ್ಯೆಯೇ ವ್ಯಾಕ್ಯವನ್ನು 2024 ರಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ICAO ತಿಳಿಸಿದೆ. * ಈ ದಿನವನ್ನು ಹಿಂದೆ 1944 ರ ಡಿಸೆಂಬರ್. 07 ರಂದು ಚಿಕಾಗೋದಲ್ಲಿ ಸಹಿ ಮಾಡಲಾಯಿತು, ಸಹಿ ಹಾಕಿದ ಹಿನ್ನಲೆಯಿಂದಾಗಿ ಈ ICAO ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನದ ದಿನವನ್ನು ಆಚರಣೆ ಮಾಡಲಾಗುತ್ತದೆ, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನದ ಸಮಾವೇಶವು ವಿಮಾನ ನೋಂದಣಿ, ವಾಯುಪ್ರದೇಶ, ಸುರಕ್ಷತೆ, ಸುಸ್ಥಿರತೆ ಮತ್ತು ಭದ್ರತೆಗಾಗಿ ನಿಯಮಗಳನ್ನು ಸ್ಥಾಪಿಸಿದೆ. * ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು 1994 ರಿಂದ ಆಚರಿಸಲು ಆರಂಭಿಸಲಾಗಿದೆ, ಅಷ್ಟೇ ಅಲ್ಲದೆ ಇದೊಂದು ವಿಶ್ವಸಂಸ್ಥೆಯ ವಿಶೇಷ ಹಾಗೂ ಧನಸಹಾಯ ಸಂಸ್ಥೆಯಾಗಿದೆ. * ವಿಶ್ವಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ ನಿತ್ಯವು 120 ಮಿಲಿಯನ್ಗಿಂತ ಅಧಿಕ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಾರೆ.