Job Description: ➤ ರಾಷ್ಟ್ರೀಯ ಪ್ರಜ್ಞೆ, ಶಿಸ್ತು ಮತ್ತು ದೇಶಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ ತ್ರಿಪುರಾ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಶಾಲೆಗಳ ಪ್ರಾತಃಕಾಲದ ಪ್ರಾರ್ಥನಾ ಸಭೆಗಳಲ್ಲಿ (Morning Assembly) ರಾಷ್ಟ್ರೀಯ ಗೀತೆ 'ಜನ ಗಣ ಮನ' ಮತ್ತು ರಾಷ್ಟ್ರೀಯ ಹಾಡು 'ವಂದೇ ಮಾತರಂ' ಅನ್ನು ಪೂರ್ಣ ಪ್ರಮಾಣದಲ್ಲಿ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.➤ ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, "ವಿದ್ಯಾರ್ಥಿಗಳಲ್ಲಿ ಸಾಂವಿಧಾನಿಕ ಮೌಲ್ಯಗಳು, ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಗೌರವ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ. ಈ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಲಿದೆ.➤ ರಾಷ್ಟ್ರಗೀತೆ: ಜನ ಗಣ ಮನ (National Anthem) ರಚನಾಕಾರರು: ರವೀಂದ್ರನಾಥ ಟ್ಯಾಗೋರ್ (ಮೂಲತಃ ಬಂಗಾಳಿ ಭಾಷೆಯ 'ಭಾರತ ಭಾಗ್ಯ ಬಿಧಾತಾ' ಕವನದಿಂದ ಆಯ್ದುಕೊಳ್ಳಲಾಗಿದೆ). ಮೊದಲ ಬಾರಿಗೆ ಹಾಡಿದ್ದು: ಡಿಸೆಂಬರ್ 27, 1911 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿವೇಶನದಲ್ಲಿ. ಸಂವಿಧಾನದ ಅಂಗೀಕಾರ: ಜನವರಿ 24, 1950 ರಂದು ಭಾರತದ ಸಂವಿಧಾನ ರಚನಾ ಸಭೆಯು ಇದನ್ನು ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಅಂಗೀಕರಿಸಿತು. ಗಾಯನದ ಅವಧಿ: ಇಡೀ ರಾಷ್ಟ್ರಗೀತೆಯನ್ನು ಹಾಡಲು ನಿಗದಿಪಡಿಸಿದ ಪ್ರಮಾಣಿತ ಸಮಯ 52 ಸೆಕೆಂಡುಗಳು. ➤ ರಾಷ್ಟ್ರೀಯ ಗೀತೆ: ವಂದೇ ಮಾತರಂ (National Song): ರಚನಾಕಾರರು: ಬಂಕಿಮ ಚಂದ್ರ ಚಟರ್ಜಿ (೧೮೭೦ರ ದಶಕದಲ್ಲಿ ರಚನೆ). ಮೂಲ ಆಕರ: ಬಂಕಿಮ ಚಂದ್ರರ ಪ್ರಸಿದ್ಧ ಕಾದಂಬರಿ 'ಆನಂದಮಠ' (1882 ರಲ್ಲಿ ಪ್ರಕಟಣೆ). ಮೊದಲ ಬಾರಿಗೆ ಹಾಡಿದ್ದು: 1896 ರ ಕಲ್ಕತ್ತಾ ಐಎನ್‌ಸಿ (INC) ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಈ ಗೀತೆಯನ್ನು ಹಾಡಿದ್ದರು. ಸ್ಥಾನಮಾನ: ಜನವರಿ 24, 1950 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು 'ವಂದೇ ಮಾತರಂ' ಗೀತೆಗೆ 'ಜನ ಗಣ ಮನ' ಗೀತೆಯಷ್ಟೇ ಸಮಾನ ಗೌರವ ಮತ್ತು ಸ್ಥಾನಮಾನವನ್ನು ಘೋಷಿಸಿದರು. ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ