Job Description: * ಸುಮಾರು '75' ವರ್ಷಗಳಿಂದ ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಒಡಿಶಾದ ನಂದ ಪ್ರಸ್ಟ್ರಿ ಅವರು ವಿಧಿವಶರಾಗಿದ್ದಾರೆ. * ನಂದಾ ಪ್ರಸ್ಟಿ ಅವರು ಯಾವುದೇ ಸರ್ಕಾರಿ ಸೌಲಭ್ಯವನ್ನು ಬಯಸದೆ ಮಕ್ಕಳ ಶಿಕ್ಷಣಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. * ನಂದಾ ಪ್ರಸ್ಟಿ ಅವರು ಹಣಕಾಸಿನ ತೊಂದರೆಯಿಂದಾಗಿ ತಮ್ಮ 7 ನೇ ತರಗತಿಯ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದರು, ತಮಗಾದ ಈ ಅಕ್ಷರ ವಂಚನೆ ಮಕ್ಕಳಿಗೆ ಆಗಬಾರದೆಂದು ತಮ್ಮ ಗ್ರಾಮದಲ್ಲಿನ ಅನಕ್ಷರತೆ ಹೋಗಲಾಡಿಸಲು ಒಳ್ಳೆಯ ನಿರ್ಧಾರವನ್ನು ಕೈಗೊಂಡರು. * ಈ ಹಿಂದಿನಿಂದ ಅಂದರೆ 1946 ರಿಂದ ನಂದಾ ಪ್ರಸ್ಟಿ ಅವರು ತಮ್ಮ ಹಳ್ಳಿಯಲ್ಲಿ ಅನಕ್ಷರತೆ ಬೇರು ಸಮೇತ ಕಿತ್ತುಹಾಕಲು ನಿರಂತರವಾಗಿ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದರು, ಈ ಕಾರ್ಯದಿಂದ ಇವರು ತಮ್ಮ ಗ್ರಾಮದಲ್ಲಿ ನಂದಾ ಮಾಸ್ಟರ್ ಎಂದೇ ಪ್ರ ಖ್ಯಾತಿ ಪಡೆದಿದ್ದರು. * ಅಕ್ಷರ ಸಂತ ನಂದಾ ಪ್ರಸ್ಟಿ ಅವರು ನಿಧನಕ್ಕೆ ಪ್ರಧಾನಿ ಮೋದಿ ಸಂತಾಪವನ್ನು ಸೂಚಿಸಿದ್ದಾರೆ.