Job Description: * ಇದೀಗ ದೆಹಲಿಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 12.8 ಕಿ.ಮೀ ಗೆ ಮೆಟ್ರೋ ಜಾಲವಿದೆ, ಆದರೆ ಕರ್ನಾಟಕ ರಾಜ್ಯ ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 3.5 ಕಿ.ಮೀ ಗೆ ಮೆಟ್ರೊ ಜಾಲವಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಸಾರ್ವಜನಿಕ ಸಾರಿಗೆಯ ಅಂತರರಾಷ್ಟ್ರೀಯ ಸಂಸ್ಥೆ 'ಯುಐಟಿಪಿ'ಯು ಭಾರತದ ಮೆಟ್ರೊ ಯೋಜನೆಗಳನ್ನು ಅಧ್ಯಯನ ಮಾಡಿದೆ, ಅಷ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಮೆಟ್ರೊ ಯೋಜನೆಗಳ ಪರಿಶೀಲನೆಯನ್ನು ನಡೆಸಿದೆ. ಈ ಮೆಟ್ರೊ ಯೋಜನೆಗಳ ವರದಿಯನ್ನು 2021 ರ ನವೆಂಬರ್ ತಿಂಗಳಿನಲ್ಲಿ ಪ್ರಕಟಿಸಿದೆ. * ಈ ಮೆಟ್ರೊ ಯೋಜನೆಗಳ ವರದಿಯ ಪ್ರಕಾರ ಲಂಡನ್ ನ ಪ್ರತಿ 10 ಲಕ್ಷ ಜನಸಂಖ್ಯೆಗೆ 46.9 ಕಿ.ಮೀ ಉದ್ದದ ಮೆಟ್ರೊ ಜಾಲವಿದೆ, ಸದ್ಯ ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 3.5 ಕಿ.ಮೀ ಉದ್ದದ ಮೆಟ್ರೊ ಜಾಲವಿದೆ ಎನ್ನಲಾಗಿದೆ. * ಇದೀಗ ಲಂಡನ್ಗೆ ಹೋಲಿಸಿದರೆ ಬೆಂಗಳೂರಿನಲ್ಲಿ 'ಮೆಟ್ರೊ' ಜಾಲ ಕಡಿಮೆ ಇದೆ, ಆದರೆ ಪ್ರಯಾಣಿಕರ ಬಳಸುವ ದೈನಂದಿನ ಮಾರ್ಗವು ಸರಾಸರಿಯು ಲಂಡನ್ ಗಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ. * ಲಂಡನ್ನಲ್ಲಿ ಪ್ರತಿ ಕಿ.ಮೀ ಮೆಟ್ರೊ ಮಾರ್ಗವನ್ನು ನಿತ್ಯವು ಸುಮಾರು 9,129 ಪ್ರಯಾಣಿಕರು ಬಳಸುತ್ತಾರೆ, ಆದರೆ ಬೆಂಗಳೂರಿನಲ್ಲಿ ಸುಮಾರು 9,456 ಪ್ರಯಾಣಿಕರು ಬಳಸುತ್ತಾರೆ, ಇನ್ನು ಮುಂಬೈ ನಗರದ ಮೆಟ್ರೊಗೆ ಹೋಲಿಸಿದರೆ ಸುಮಾರು 40,650 ಪ್ರಯಾಣಿಕರು ಬಳಸುತ್ತಾರೆ, ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.