Job Description: * ಯುಟು - 2 ಇದೊಂದು ಚೀನಾ ದೇಶದ ಲೂನಾರ್ ರೋವರ್ ಆಗಿದೆ, ಈ ರೋವರ್'ನ್ನು ಚಾಂಗ್'ಇ 4 ಮಿಷನ್ನಲ್ಲಿ ಚಂದ್ರನಲ್ಲಿಗೆ ಉಡಾವಣೆ ಮಾಡಲಾಗಿದೆ. * ಈ ಯುಟು - 2 ರೋವರ್ ನ್ನು 2018 ರಲ್ಲಿ ಆರಂಭಿಸಲಾಯಿತು, ಹಾಗೂ ಇದನ್ನು 2019 ರಲ್ಲಿ ಚಂದ್ರನ ಮೇಲೆ ಇಳಿಸಲಾಯಿತು, ಈ ರೋವರ್ ಚಂದ್ರನ ದೂರದ ಭಾಗದಲ್ಲಿ ಘನ ಆಕಾರದ ರಹಸ್ಯವನ್ನು ಗುರುತಿಸಿದೆ. * ಈ ಯುಟು - 2 ರೋವರ್ ಚಂದ್ರನ ದೂರದ ಭಾಗದಲ್ಲಿ ಘನ ಆಕಾರದ ವಸ್ತುವನ್ನು ಗುರುತಿಸಿದೆ, ಆ ವಸ್ತು ದೊಡ್ಡ ಬಂಡೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. * ಚಾಂಗ್ 4 ಮಿಷನ್ ಎಂಬುವದು ಚೇಂಜ್'ಇ 4 ಚೀನಾ ದೇಶದ 4 ನೇ ಚಂದ್ರನ ಕಾರ್ಯಾಚರಣೆಯಾಗಿದೆ, ಈ ಮೊದಲಿನ ಚಾಂಗ್'ಇ 1 ಹಾಗೂ ಚಾಂಗ್'ಇ 2 ಮಿಷನ್ಗಳು ಆರ್ಬಿಟರ್, ಹಾಗೂ ಈ ಚಾಂಗ್'ಇ 3 ಯುಟು ಜೊತೆಗೆ ಚಂದ್ರನ ಸಮೀಪ ಪ್ರದೇಶದಲ್ಲಿ ಇಳಿಯಿತು. * ಚಾಂಗ್'ಇ 5 ಮಿಷನ್ ಚಂದ್ರನ ಮಾದರಿಯನ್ನು ಮರಳಿ ಭೂಮಿಗೆ ತಂದಿತು. * ಯುಟು - 2 ಇದೊಂದು ಸೌರಶಕ್ತಿ ಚಾಲಿತ ಆರು ಚಕ್ರಗಳಿಂದ ಕೂಡಿದೆ, ಯುಟು - 2 ಮೊದಲ ಬಾರಿಗೆ ಚಂದ್ರನ ಎಜೆಕ್ಟಾ ಅನುಕ್ರಮವನ್ನು ಚಿತ್ರವನ್ನು ಸೆರೆಹಿಡಿದಿದೆ, ವಿಜ್ಞಾನಿಗಳು 2020 ರಲ್ಲಿ ಮೊದಲ ಬಾರಿ ಚಂದ್ರನ ಎಜೆಕ್ಟಾ ಅನುಕ್ರಮದ ಹೆಚ್ಚಿನ ರೆಸಲ್ಯೂಶನ್ ಚಿತ್ರವನ್ನು ವರದಿ ಮಾಡಿದರು. * ಚಂದ್ರನು ತನ್ನ ಅಕ್ಷದ ಸುತ್ತ ಒಂದು ತಿರುಗುವಿಕೆಯನ್ನು ಪೂರ್ಣಗೊಳಿಸಲು 29 ಭೂಮಿಯ ದಿನಗಳನ್ನು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.