Job Description: * ಪ್ರಸ್ತುತ ಒಲಾಫ್ ಶೋಲ್ಜ್ ಅವರನ್ನು ಜರ್ಮನಿಯ ಸಂಸತ್ ತನ್ನ ದೇಶದ 9 ನೇ ಛಾನ್ಸಲರ್ ಆಗಿ ಇವರನ್ನು ಆಯ್ಕೆ ಮಾಡಿದೆ. * ಈ ಹಿಂದೆ ಸತತವಾಗಿ 16 ವರ್ಷ ಅಧಿಕಾರ ನಡೆಸಿದ ಅಂಗೆಲಾ ಮೆರ್ಕೆಲ್ ಅವರ ಸ್ಥಾನವನ್ನು ಒಲಾಫ್ ಶೋಲ್ಜ್ ಅವರು ವಹಿಸಿಕೊಂಡಿದ್ದಾರೆ. * ಪ್ರಸ್ತುತ ಒಲಾಫ್ ಶೋಲ್ಜ್ ಅವರು ಜರ್ಮನಿಯ ಛಾನ್ಸಲರ್ ಆಗಿ 395-303 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. * ಜರ್ಮನಿಯ 736 ಸದಸ್ಯರಿರುವ ಸಂಸತ್ ಕೆಳಮನೆಯಲ್ಲಿ ಒಲಾಫ್ ಶೋಲ್ಜ್ ನೇತೃತ್ವದ ಮೂರು ಪಕ್ಷಗಳ ಸಮ್ಮಿಶ್ರ ಒಕ್ಕೂಟ ಒಟ್ಟು 416 ಸ್ಥಾನಗಳನ್ನು ಪಡೆದುಕೊಂಡಿದೆ. * ಒಲಾಫ್ ಶೋಲ್ಜ್ ಅವರು ಈ ಹಿಂದೆ 2018 ರಿಂದ ವೈಸ್ ಛಾನ್ಸಲರ್ ಹಾಗೂ ಹಣಕಾಸು ಸಚಿವರಾಗಿದ್ದರು.