Job Description: * ಪ್ರಸ್ತುತ ಮುಂದಿನ ವರ್ಷ ಚೀನಾ ದೇಶದಲ್ಲಿ ಜರುಗಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುವ ದೇಶಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. * ಇತ್ತೀಚಿಗಷ್ಟೇ ಕೆಲ ದಿನಗಳ ಹಿಂದೆ ಅಮೇರಿಕ ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಿದೆ, ಮತ್ತೇ ಇದೀಗ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ, ದೇಶಗಳು ಅಮೇರಿಕ ದೇಶದ ಜೊತೆ ಕೈಜೋಡಿಸಿವೆ. * ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಿದ ದೇಶಗಳು ತಮ್ಮ ದೇಶದ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರನ್ನು ಈ ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಳ್ಳದಿರಲು ನಿರ್ಧಾರವನ್ನು ಕೈಗೊಂಡಿವೆ. * ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಅವರು ಈ ಚಳಿಗಾಲದ ಒಲಿಂಪಿಕ್ಸ್ಗೆ ರಾಜಕೀಯ ಬಹಿಷ್ಕಾರವನ್ನು ಹಾಕಲಾಗುವದಾಗಿ ತಿಳಿಸಿದ್ದಾರೆ. * ಇತ್ತೀಚಿಗೆ ಚೀನಾ ದೇಶದಲ್ಲಿ ಅತಿ ಹೆಚ್ಚಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ, ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಕೃತ್ಯಗಳು ಜರುಗುತ್ತಿವೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ, ಇದೀಗ ಚೀನಾ ದೇಶವು ಈ ವಿಷಯಗಳನ್ನು ಎದುರಿಸಬೇಕಾಗಿದೆ.