Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ತಿಳಿಸಿರುವ ಪ್ರಕಾರ ಇನ್ನು ಮುಂದೆ ಫೀಚರ್ ಫೋನ್ ಬಳಕೆದಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಇಂಟರ್ನೆಟ್ ಇಲ್ಲದೇ UPI (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್-ಬೇಸ್ಡ್) ಮೂಲಕ ಪಾವತಿ ಸೌಲಭ್ಯವನ್ನು ಶೀಘ್ರವೇ ಜಾರಿಗೊಳಿಸಲಾಗುವದು ಎಂದು ತಿಳಿಸಿದ್ದಾರೆ. * ಗವರ್ನರ್ ಶಕ್ತಿಕಾಂತ ದಾಸ್ ಅವರು ದ್ವೈಮಾಸಿಕ ವಿತ್ತೀಯ ನೀತಿ ಸಮಿತಿ ಸಭೆಯ ಬಳಿಕ ಮಾಹಿತಿಯನ್ನು ನೀಡಿದ್ದಾರೆ, ಇದೀಗ ದೇಶಾದ್ಯಂತ ಬಳಕೆದಾರರ ಸಹಾಯಕ್ಕಾಗಿ UPI ಪಾವತಿಯನ್ನು ಸರಾಗಗೊಳಿಸಲು 3 ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. 1) RBI ರಿಟೇಲ್ ಡೈರೆಕ್ಟ್ ಸ್ಕೀಮ್ ಹಾಗೂ ಐಪಿಒ ಆಫರಿಂಗ್ ಅರ್ಜಿ ಸಲ್ಲಿಕೆಗೆ ಸಹಾಯವಾಗುವಂತೆ UPI ವಹಿವಾಟಿನ ಮಿತಿಯನ್ನು 2 ಲಕ್ಷ ರೂ. ದಿಂದ 5 ಲಕ್ಷ ರೂ. ಹೆಚ್ಚಿಸಲಾಗಿದೆ, ಹಾಗೂ ಇದು RBI ಗಿಲ್ಟ್ ಸೆಕ್ಯುರಿಟೀಸ್ ಖಾತೆಯನ್ನು ಹೊಂದಿರುವ ಬಳಕೆದಾರರಿಗೆ ಸಹಾಯ ನೀಡಲಿದೆ. * ಮತ್ತು ಸಣ್ಣ ಮೌಲ್ಯದ ವಹಿವಾಟುಗಳಿಗಾಗಿ 'ಆನ್-ಡಿವೈಸ್' ವಾಲೆಟ್ನಲ್ಲಿ ಸಹಾಯ ಮಾಡಿಕೊಡಲಾಗಿದೆ, ಇದರಿಂದಾಗಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಬಳಕೆದಾರರಿಗೆ ಪಾವತಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ. * RBI ಯುಪಿಐ, ಕಾರ್ಡ್ಗಳು, ವಾಲೆಟ್ಗಳನ್ನು ಹೊಂದಿರುವ ಪಾವತಿ ಸಿಸ್ಟಮ್ಲ್ಲಿರುವ ವಿವಿಧ ಚಾರ್ಜಸ್ ಬಗೆಗಿನ ಚರ್ಚಾ ಪತ್ರವನ್ನು ಶೀಘ್ರವೇ ಬಿಡುಗಡೆಗೊಳಿಸಲಿದೆ. 2) ಐಪಿಒ ಆಫರಿಂಗ್ಗೆ ಯುಪಿಐ ಪಾವತಿ: ಷೇರುಪೇಟೆಯಲ್ಲಿ ಇನಿಷಿಯಲ್ ಪಬ್ಲಿಕ್ ಆಫರಿಂಗ್ಸ್ (IPO)ನಲ್ಲಿ UPI ಪಾವತಿ ಬಳಕೆ 2019 ರ ಜನವರಿ 1 ರಿಂದ ಆರಂಭವಾಗಿದೆ, ಇದೀಗ 2020 ರ ಮಾರ್ಚ್ ನ ವೇಳೆಗೆ 1 ಲಕ್ಷ ರೂ. ಐಪಿಒಗೆ ಹೂಡಿಕೆ ಮಾಡಲು UPI ಮೂಲಕ ಮಾಡಬಹುದಾಗಿತ್ತು, ಇದೀಗ ಇದನ್ನು 2 ಲಕ್ಷ ರೂ. ದಿಂದ 5 ಲಕ್ಷ ರೂ.ಗೆ ಏರಿಕೆಯಾಗಿದೆ. 3) ಫಿನ್ಟೆಕ್ ವ್ಯವಸ್ಥೆಯಲ್ಲಿ ಯುಪಿಐ: ಭಾರತದ ಫಿನ್ಟೆಕ್ ವ್ಯವಸ್ಥೆಯಲ್ಲಿ UPIಗೆ ಒಂದು ಉತ್ತಮ ಸ್ಥಾನವಿದೆ. ಪ್ರಸ್ತುತ ಇದೇ ಹಣಕಾಸು ವರ್ಷದ 2 ನೇ ತ್ರೖೆಮಾಸಿಕದ ಅವಧಿಯಲ್ಲಿ UPI ಪಾವತಿ ಒಟ್ಟು 260 ಶತಕೋಟಿ ಡಾಲರ್ ನ್ನು ತಲುಪಿದೆ. * ಪ್ರಸ್ತುತ ಫೋನ್ಪೇ, ಗೂಗಲ್ ಪೇ, ಪೇಟಿಎಂ ಈ ಎಲ್ಲ ಪಾವತಿ ಪ್ಲಾಟ್ಫಾರಂಗಳಿಗೆ UPI ಬೆನ್ನೆಲುಬು ಆಗಿದೆ. * ಗವರ್ನರ್ ಶಕ್ತಿಕಾಂತ ದಾಸ್ ಅವರು ತಿಳಿಸಿರುವ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ರಿವರ್ಸ್ ರೆಪೋ ದರವನ್ನು ಶೇಕಡ 4 ರಲ್ಲಿ ಸ್ಥಿರವಾಗಿದೆ, ಹಾಗೂ ರಿಯಲ್ ಜಿಡಿಪಿ ಶೇಕಡ 9.5 ಕ್ಕೆ ತಲುಪಿದೆ ಎಂದಿದ್ದಾರೆ.