Job Description: * ಇದೀಗ ಕೇಂದ್ರ ಸಚಿವ ಸಂಪುಟವು ದೇಶದ ಗ್ರಾಮೀಣ ಪ್ರದೇಶದಲ್ಲಿರುವ ಅರ್ಹರಿಗೆ ವಸತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಿರುವ ಪ್ರಧಾನಮಂತ್ರಿ ಆವಾಜ್ ಯೋಜನೆ (ಗ್ರಾಮೀಣ)ಯನ್ನು ಇನ್ನು '3' ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ. * ಇತ್ತೀಚಿಗೆ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಇನ್ನು ಮುಂದಿನ '3' ವರ್ಷಗಳ ಅವಧಿಯಲ್ಲಿ 155.75 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿ ವಾಹಿನಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಈ ಪರಿಷ್ಕೃತ ನಿರ್ಧಾರದ ಪ್ರಕಾರ ಪ್ರಧಾನಮಂತ್ರಿ ಆವಾಜ್ ಯೋಜನೆ (ಗ್ರಾಮೀಣ)ಯ 2024 ಮಾರ್ಚ್. 31 ಕ್ಕೆ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ. * ಈ ಪ್ರಧಾನಮಂತ್ರಿ ಆವಾಜ್ ಯೋಜನೆ (ಗ್ರಾಮೀಣ)ಗೆ 2,17,257 ಕೋಟಿ ರೂ. ವೆಚ್ಚ ತಗುಲಲಿದೆ, ಇದರಲ್ಲಿ ಕೇಂದ್ರ ಸರ್ಕಾರವು 1,25,106 ಕೋಟಿ ರೂ. ವೆಚ್ಚವನ್ನು ಭರಿಸಲಿದೆ, ಹಾಗೂ ರಾಜ್ಯ ಸರ್ಕಾರಗಳು 73,475 ಕೋಟಿ ರೂ. ವೆಚ್ಚವನ್ನು ಭರಿಸಲಿವೆ ಎಂದು ತಿಳಿಸಿದ್ದಾರೆ.