Job Description: * ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ ದೆಹಲಿ, ಕರ್ನಾಟಕ, ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಅತೀ ಹೆಚ್ಚಾಗಿ ಎಲಕ್ಟ್ರಿಕ್ ವಾಹನಗಳು ಮಾರಾಟವಾಗುತ್ತಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. * ಇಲ್ಲಿಯವರೆಗೆ ದೇಶದಲ್ಲಿ ಸರಿ ಸುಮಾರು 8.7 ಲಕ್ಷ ಎಲಕ್ಟ್ರಿಕ್ ವಾಹನಗಳು ಮಾರಾಟವಾಗಿವೆ, ಈ ಮಾರಾಟವಾಗಿರುವ ಎಲಕ್ಟ್ರಿಕ್ ವಾಹನಗಳು ಅತೀ ಹೆಚ್ಚಾಗಿ ಉತ್ತರಪ್ರದೇಶ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಾರಾಟವಾಗಿವೆ, ಹಾಗೂ ದೇಶದಲ್ಲಿ ಎಲಕ್ಟ್ರಿಕ್ ವಾಹನಗಳು ಮಾರಾಟಮಾಡುವದರಲ್ಲಿ ಉತ್ತರಪ್ರದೇಶ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳು ಮೊದಲ '3' ಅಗ್ರ ಸ್ಥಾನಗಳನ್ನೂ ಪಡೆದಿವೆ, ಇದರ ನಂತರ 5 ನೇ ಸ್ಥಾನದಲ್ಲಿ ಬಿಹಾರ ರಾಜ್ಯ, ಹಾಗೂ 6 ನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯ. * ಇದೀಗ ಕೇಂದ್ರ ಸರ್ಕಾರವು ದೇಶದಲ್ಲಿ ಗ್ರಾಹಕರ ಎಲಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅವುಗಳ ಮೇಲಿನ GST ಯನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಸಿದೆ.